
ಪ್ರಜಾವಾಣಿ ವಾರ್ತೆಕೋಲಾರ: ತಾಲ್ಲೂಕಿನ ಷಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾರಂಘಟ್ಟ ಗ್ರಾಮದ ಬಳಿ ಕಾರ್ಖಾನೆಯಿಂದ ಬೆಳೆಗಳಿಗೆ ಹಾನಿ ಆಗುತ್ತಿದೆ ಎಂದು ಕೆಲ ರೈತರು ದೂರಿದ್ದಾರೆ.
ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
‘ಟಯರ್ ಸುಟ್ಟು ಅದರ ಪುಡಿಯನ್ನು ಸಿಮೆಂಟ್ ಕಾರ್ಖಾನೆಗಳಿಗೆ ರಪ್ತು ಮಾಡಲಾಗುತ್ತಿದೆ. ಈ ಕಾರ್ಖಾನೆಯಿಂದ ಹೊರ ಸೂಸುವ ವಿಷ ಅನಿಲ, ತ್ಯಾಜ್ಯ ನೀರು, ಕಪ್ಪು ಪುಡಿ ಸುತ್ತಮುತ್ತ ಆವರಿಸಿಕೊಂಡು ಬೆಳೆ ಹಾನಿ ಹಾಗೂ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಬೆಳೆಗಳ ಎಲೆಗಳ ಮೇಲೆ ಬಿದ್ದು ಬೆಳೆಗಳು ಹಾಳಾಗುತ್ತಿವೆ. ರೇಷ್ಮೆ ಬೆಳೆ ಬೆಳೆಯಲಾಗುತ್ತಿಲ್ಲ’ ಎಂದು ಕೆಲ ರೇಷ್ಮೆ ಬೆಳೆಗಾರರು, ರೈತರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.