ADVERTISEMENT

ಕೊಳೆತ ಸ್ಥಿತಿಯಲ್ಲಿ ತಂದೆ ಮಗನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 15:42 IST
Last Updated 14 ಸೆಪ್ಟೆಂಬರ್ 2023, 15:42 IST
ಸಾವು–‍ಪ್ರಾತಿನಿಧಿಕ ಚಿತ್ರ
ಸಾವು–‍ಪ್ರಾತಿನಿಧಿಕ ಚಿತ್ರ   

ಬಂಗಾರಪೇಟೆ: ತಾಲ್ಲೂಕಿನ ಬೆಮಲ್ ನಗರದ ಬಳಿ ಇರುವ ಎಂ.ವಿ.ನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ತಂದೆ, ಮಗನ ಶವ ಪತ್ತೆಯಾಗಿವೆ.

ಎಂ.ವಿ.ನಗರದ ನಿವಾಸಿಗಳಾದ ವಸಂತ ರಾಜುಲು (84) ಮಗ ಸೂರ್ಯ ಪ್ರಕಾಶ್ (44) ಮೃತಪಟ್ಟವರು. ತಮ್ಮ ಮನೆಯಲ್ಲಿಯೇ ಶವ ಪತ್ತೆಯಾಗಿವೆ. ನಾಲ್ಕೈದು ದಿನದ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಂದೆ ವೃದ್ಧರಾಗಿದ್ದು, ಮಗ ಆಗಾಗ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಾಂತಕುಮಾರ್, ಇನ್‌ಸ್ಪೆಕ್ಟರ್‌ ಸಂಜೀವರಾಯಪ್ಪ ಭೇಟಿ ನೀಡಿದ್ದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.