ADVERTISEMENT

ನಾಯಿಗಳಿಗೆ ಹೆದರಿ ಮನೆಗೆ ಬಂದ ಅತಿಥಿ

ಶ್ರೀನಿವಾಸಪುರ: ನೀರುಕೋಳಿಯ ಜೀವ ಉಳಿಸಿದ ಮೇಷ್ಟ್ರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 10:32 IST
Last Updated 25 ನವೆಂಬರ್ 2019, 10:32 IST
ನಿವೃತ್ತ ಮುಖ್ಯ ಶಿಕ್ಷಕ ಪಿ.ಎಂ.ನಾರಾಯಣಸ್ವಾಮಿ, ತಾವು ರಕ್ಷಿಸಿದ ನೀರುಕೋಳಿಯನ್ನು ಪೊದೆಯೊಳಗೆ ಬಿಟ್ಟರು
ನಿವೃತ್ತ ಮುಖ್ಯ ಶಿಕ್ಷಕ ಪಿ.ಎಂ.ನಾರಾಯಣಸ್ವಾಮಿ, ತಾವು ರಕ್ಷಿಸಿದ ನೀರುಕೋಳಿಯನ್ನು ಪೊದೆಯೊಳಗೆ ಬಿಟ್ಟರು   

ಶ್ರೀನಿವಾಸಪುರ: ಪಾಳ್ಯ ಗ್ರಾಮದ ಮನೆಯೊಂದನ್ನು ಪ್ರವೇಶಿಸಿದ ನೀರು ಕೋಳಿಯನ್ನು ಶಿಕ್ಷಕ ಪಿ.ಎಂ.ನಾರಾಯಣಸ್ವಾಮಿ ರಕ್ಷಿಸಿದ್ದಾರೆ.

ಸ್ವಾಮಿ, ಸಂಜೆ ಮನೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಹಕ್ಕಿಯೊಂದು ಚೀರುತ್ತಾ ಮನೆ ಪ್ರವೇಶಿಸಿ ಮೂಲೆಯೊಂದರಲ್ಲಿ ಬಿದ್ದಿತು. ಇದರಿಂದ ಮೇಷ್ಟ್ರು ಒಂದು ಕ್ಷಣ ಗಲಿಬಿಲಿಯಾದರು. ಎದ್ದು ಹೊರಗೆ ನೋಡಿದರು. ಹಕ್ಕಿಯನ್ನು ಅಟ್ಟಿಸಿಕೊಂಡು ಬಂದಿದ್ದ ನಾಯಿಗಳು ಮನೆಯ ಹೊರಗೆ ನಿಂತಿದ್ದವು.

ನಾಯಿಗಳನ್ನು ಓಡಿಸಿ ಮನೆಯೊಳಗೆ ಬಂದು ನೋಡಿದರೆ, ಸ್ಥಳೀಯವಾಗಿ ‘ಬಲ್ಲಿಕೋಡಿ’ ಎಂದು ಕರೆಯುವ ಪುಟ್ಟ ನೀರುಕೋಳಿ. ನಾಯಿಗಳ ದಾಳಿಗೆ ಹೆದರಿ ನಡುಗುತ್ತ ಮೂಲೆಯಲ್ಲಿ ಮುದುಡಿ ಕುಳಿತಿತ್ತು. ಹಿಡಿದುಕೊಳ್ಳಲು ಹೋದರೆ ಇನ್ನಷ್ಟು ಹೆದರಿ ಮನೆಯೆಲ್ಲಾ ಹಾರಾಡಿ ಟೇಬಲ್‌ ಕೆಳಗೆ ಅಡಗಿ ಕುಳಿತಿತು. ಮೇಷ್ಟ್ರು ತಮ್ಮ ಪತ್ನಿ ನೆರವು ಪಡೆದು ಹಕ್ಕಿ ಹಿಡಿಯುವಲ್ಲಿ ಯಶಸ್ವಿಯಾದರು.

ADVERTISEMENT

ಶುಕ್ರವಾರ ಬೆಳಿಗ್ಗೆ ಎದ್ದು ನೋಡಿದರೆ, ಹಕ್ಕಿ ಚೇತರಿಸಿಕೊಂಡಿತ್ತು. ಗ್ರಾಮದ ಹೊರಗಿನ ಪೊದೆಯೊಂದಕ್ಕೆ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.