ADVERTISEMENT

ಬಂಗಾರಪೇಟೆ: ರಸಗೊಬ್ಬರ ಅಂಗಡಿಯಲ್ಲಿ ಬೆಂಕಿ ಅವಘಡ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 7:45 IST
Last Updated 4 ಆಗಸ್ಟ್ 2025, 7:45 IST
ಹುಣಸನಹಳ್ಳಿ ಗ್ರಾಮದ ರೈಲ್ವೆ ಸೇತುವೆ ಬಳಿಯಿರುವ ರಸಗೊಬ್ಬರ ಅಂಗಡಿಗೆ ಬೆಂಕಿ ತಗುಲಿ ನಾಶವಾಗಿರುವುದು
ಹುಣಸನಹಳ್ಳಿ ಗ್ರಾಮದ ರೈಲ್ವೆ ಸೇತುವೆ ಬಳಿಯಿರುವ ರಸಗೊಬ್ಬರ ಅಂಗಡಿಗೆ ಬೆಂಕಿ ತಗುಲಿ ನಾಶವಾಗಿರುವುದು   

ಬಂಗಾರಪೇಟೆ: ಹುಣಸನಹಳ್ಳಿ ಗ್ರಾಮದ ರಸಗೊಬ್ಬರ ಅಂಗಡಿಗೆ ಬೆಂಕಿ ತಗುಲಿ ರಸಗೊಬ್ಬರ ಹಾಗೂ ಕೀಟನಾಶಕ ಬೆಂಕಿಗಾಹುತಿಯಾಗಿ, ಅಪಾರ ನಷ್ಟ ಉಂಟಾಗಿದೆ.

ಹುಣಸನಹಳ್ಳಿ ಗ್ರಾಮದ ರೈಲ್ವೆ ಸೇತುವೆ ಬಳಿಯ ರಸಗೊಬ್ಬರದ ಅಂಗಡಿಯಲ್ಲಿ ಭಾನುವಾರ ಮಧ್ಯಾಹ್ನ ಏಕಾಏಕಿ ಅಂಗಡಿ ಒಳಗಿಂದ ಹೊಗೆ ಕಾಣಿಸಿಕೊಂಡಿದೆ. ರಸಗೊಬ್ಬರ ಅಂಗಡಿಯವರು ಭಾನುವಾರ ರಜೆ ಇದ್ದ ಕಾರಣ ಬಾಗಿಲಿಗೆ ಬೀಗ ಜಡಿದಿದ್ದರು. ಆದರೆ ಹೊಗೆ ಹಾಗೂ ಕೆಟ್ಟ ವಾಸನೆ ಈಡೀ ಕಟ್ಟಡವನ್ನು ಆವರಿಸಿತು. ಆಗ ಕಟ್ಟಡ ಮಾಲೀಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಪರಿಶೀಲಿಸಿದಾಗ ಕಟ್ಟಡದಲ್ಲಿ ದಾಸ್ತಾನು ಮಾಡಿದ್ದ ರಸಗೊಬ್ಬರ ಹಾಗೂ ಕೀಟನಾಶಕಗಳಿಗೆ ಬೆಂಕಿ ತಗುಲಿರುವುದು ಕಂಡು ಬಂದಿದೆ.

ಕಟ್ಟಡದ ಮಾಲೀಕರು ಅಂಗಡಿ ಮಾಲೀಕರಿಗೆ ಮಾಹಿತಿ ತಿಳಿಸಿ ಅಂಗಡಿಯ ಬೀಗ ಹೊಡೆದು ಬೆಂಕಿಯನ್ನು ನಂದಿಸಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ADVERTISEMENT

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.