ADVERTISEMENT

ಶ್ರೀನಿವಾಸಪುರ: ಫೆ.14ಕ್ಕೆ ಹೊನಲು ಬೆಳಕಿನ ವಾಲಿಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:05 IST
Last Updated 10 ಫೆಬ್ರುವರಿ 2026, 5:05 IST
ಶ್ರೀನಿವಾಸಪುರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ವಾಲಿಬಾಲ್‌ ಟೂರ್ನಿಯ ಮಾಹಿತಿ ನೀಡಿದರು
ಶ್ರೀನಿವಾಸಪುರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ವಾಲಿಬಾಲ್‌ ಟೂರ್ನಿಯ ಮಾಹಿತಿ ನೀಡಿದರು   

ಶ್ರೀನಿವಾಸಪುರ: ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಅಭಿಮಾನಿ ಬಳಗದಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಫೆ.14 ಹಾಗೂ 15ರಂದು ಹೊನಲು ಬೆಳಕಿನ ವಿಆರ್‌ಕೆ ವಾಲಿಬಾಲ್‌ ಟೂರ್ನಿ ಆಯೋಜಿಸಲಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ತಿಳಿಸಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಸಂಜೆ 5 ಗಂಟೆಗೆ ಟೂರ್ನಿಗೆ ಚಾಲನೆ ಸಿಗಲಿದೆ. 15 ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ರಾಜ್ಯದ ಬೆಂಗಳೂರು, ಮಂಗಳೂರು ಅಲ್ಲದೇ, ಆಂಧ್ರಪ್ರದೇಶ, ತಮಿಳುನಾಡು ತಂಡಗಳೂ ಬರಲಿವೆ’ ಎಂದರು.

ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥ್, ಮುಖಂಡರಾದ‌ ನಾಗದೇನಹಳ್ಳಿ ಬಿ.ಸೀತರಾಮರೆಡ್ಡಿ, ಸೋಮಯಾಜಹಳ್ಳಿ ಮಂಜುನಾಥರೆಡ್ಡಿ, ಮದರಂಕಪಲ್ಲಿ ಪ್ರಶಾಂತ್, ಕೃಷ್ಣಾರೆಡ್ಡಿ, ವೆಂಕಟರೆಡ್ಡಿ, ಮನೋಹರ್, ಮಂಜುನಾಥರೆಡ್ಡಿ, ಜಿ.ವಿ.ನಾಗರಾಜ್‌ರೆಡ್ಡಿ, ಶ್ಯಾಮಶಿವರಾಜ್, ನರಸಿಂಹಮೂರ್ತಿ, ವ್ಯಾಪಲಪಲ್ಲಿ ನರೇಶ್, ಸಂತೋಷ್, ಹರೀಶ್‌ರಾಜ್, ಸೋಮನಾಥಬಾಬು, ವಿಶ್ವನಾಥಗೌಡ, ರಾಮಕೃಷ್ಣಪ್ಪ, ನವಚೇತನರೆಡ್ಡಿ, ವೆಂಕಟಾದ್ರಿ ಇದ್ದರು.

ADVERTISEMENT