ಬಂಗಾರಪೇಟೆ: ಏಕಾಏಕಿ ಹೂವಿನ ಬೆಲೆ ಕುಸಿತದಿಂದ ಬೇಸತ್ತ ರೈತರು ಸೋಮವಾರ ಬಂಗಾರಪೇಟೆ ಮತ್ತು ಕೋಲಾರದ ಮುಖ್ಯರಸ್ತೆ ಬದಿಯಲ್ಲಿ ಹೂಗಳನ್ನು ಸುರಿದಿದ್ದಾರೆ.
ಶ್ರಾವಣ ಮಾಸದ ಹಬ್ಬಗಳು ಮುಗಿದ ನಂತರ ಹೂವಿಗೆ ಬೇಡಿಕೆ ಕಡಿಮೆಯಾಗಿತ್ತು. ಅಕ್ಟೋಬರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಕಟಾವಿಗೆ ಬಂದಿದ್ದು, ಮಾರುಕಟ್ಟೆಗೂ ಭಾರಿ ಪ್ರಮಾಣದಲ್ಲಿ ಹೂವು ಬರುತ್ತಿದೆ. ಹಾಗಾಗಿ ಬೇಡಿಕೆ ಮತ್ತು ಬೆಲೆ ಕುಸಿದಿದೆ ಎನ್ನುವುದು ವರ್ತಕರ ವಿಶ್ಲೇಷಣೆ.
ಸೋಮವಾರ ಮಾರುಕಟ್ಟೆಗೆ ತಂದಿದ್ದ ರಾಶಿ, ರಾಶಿ ಚೆಂಡು ಹೂವು, ಸೇವಂತಿ ಹೂವಿಗೆ ಸರಿಯಾದ ಬೆಲೆ ಸಿಗದ ಕಾರಣ ಹತಾಶರಾದ ರೈತರು ಹೂವುಗಳನ್ನು ರಸ್ತೆ ಬದಿ ಸುರಿದು ಹೋಗಿದ್ದಾರೆ. ಕೆ.ಜಿ ಚೆಂಡು ಹೂ ₹10, ಸೇವಂತಿ ₹40 ಮತ್ತು ಗುಲಾಬಿ ₹50ರಂತೆ ಮಾರಾಟವಾಗುತ್ತಿವೆ.
ಹಾಕಿದ ಬಂಡವಾಳ ಮರಳುವುದು ದೂರದ ಮಾತು. ಹೂ ಕಟಾವು ಕೂಲಿ, ಮಾರುಕಟ್ಟೆಗೆ ಸಾಗಿಸಲು ತಗಲುವ ವೆಚ್ಚ ಕೂಡ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಜಿಟಿ ಮಳೆಯಾಗುತ್ತಿದೆ. ಹೀಗಾಗಿ ಅನೇಕ ಬೆಳೆಗಾರರು ಹೂವು ಕೊಯ್ಲು ಮಾಡದೆ ತೋಟದಲ್ಲೇ ಬಿಟ್ಟಿದ್ದಾರೆ ಎಂದು ರೈತರು ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.