ADVERTISEMENT

ಹರಾಜಿನಿಂದ ₹ 17.56 ಲಕ್ಷ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 2:52 IST
Last Updated 25 ಮಾರ್ಚ್ 2022, 2:52 IST
ಶ್ರೀನಿವಾಸಪುರದಲ್ಲಿ ಪುರಸಭೆ ವತಿಯಿಂದ ಗುರುವಾರ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಸಲಾಯಿತು.
ಶ್ರೀನಿವಾಸಪುರದಲ್ಲಿ ಪುರಸಭೆ ವತಿಯಿಂದ ಗುರುವಾರ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಸಲಾಯಿತು.   

ಶ್ರೀನಿವಾಸಪುರ: ಪಟ್ಟಣದ ಪುರಸಭೆಯಿಂದ ಗುರುವಾರ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಯಿತು.

ಹರಾಜಿನಲ್ಲಿ ದಿನವಹಿ ಮಾರುಕಟ್ಟೆ ವಾರ್ಷಿಕ ₹ 10.20 ಲಕ್ಷ, ವಾರದ ಸಂತೆ ₹ 3.68 ಲಕ್ಷ, ಕಸಾಯಿ ಖಾನೆ ₹ 8,500, ಬಸ್ ನಿಲ್ದಾಣ ಶುಲ್ಕ ₹ 2.56 ಲಕ್ಷ, ತಾಲ್ಲೂಕು ಕಚೇರಿ ಮುಂಭಾಗದ ಶೌಚಾಲಯ ಶುಲ್ಕ ₹ 18,000, ಪುರಸಭೆ ವಾಣಿಜ್ಯ ಮಾರುಕಟ್ಟೆಯಲ್ಲಿರುವ ಶೌಚಾಲಯ ಶುಲ್ಕ ₹ 16,000, ಮುಸಾಫಿರ್ ಖಾನಾ ನೆಲಮಹಡಿ ವಾಹನ ನಿಲುಗಡೆ ಶುಲ್ಕ ₹ 70,000ಕ್ಕೆ ಹರಾಜು ಮಾಡಲಾಯಿತು.

ಈ ಹರಾಜಿನಿಂದ ಪುರಸಭೆಗೆ ವಾರ್ಷಿಕ ಒಟ್ಟು ₹ 17.56 ಲಕ್ಷ ವರಮಾನ ಸಿಕ್ಕಿದೆ.

ADVERTISEMENT

ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ, ಕಂದಾಯ ನಿರೀಕ್ಷಕ ವಿ. ನಾಗರಾಜ್, ಎನ್. ಶಂಕರ್, ನಾಗೇಶ್, ವೆಂಕಟೇಶ್, ಸುರೇಶ್, ಮುನಿರಾಜು, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.