ADVERTISEMENT

ಅರಾಭಿಕೊತ್ತನೂರು | ಕಾರ್ಯನಿರ್ವಹಿಸದ 'ಗ್ರಾಮ ಒನ್‌'

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 6:11 IST
Last Updated 22 ಜುಲೈ 2023, 6:11 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಗ್ರಾಮ ಒನ್‌ ಕೇಂದ್ರ
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಗ್ರಾಮ ಒನ್‌ ಕೇಂದ್ರ   

ಕೋಲಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಫಲಾನುಭವಿಗಳಿಂದ ಅರ್ಜಿ ಸಲ್ಲಿಕೆ‌ ಆರಂಭಗೊಂಡಿದ್ದು, ಕೆಲ ಗ್ರಾಮ ಒನ್‌ ಕೇಂದ್ರಗಳಲ್ಲಿ ಇನ್ನೂ ನೋಂದಣಿಗೆ ವ್ಯವಸ್ಥೆ ಮಾಡಿಲ್ಲ.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಒನ್‌ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಮಹಿಳೆಯರು ಬಂದರಾದರೂ ಕೇಂದ್ರದಲ್ಲಿ ವ್ಯವಸ್ಥೆ ಇಲ್ಲದೆ ವಾಪಸ್‌ ತೆರಳಿದರು. ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಅರಾಭಿಕೊತ್ತನೂರು ವೃತ್ತಕ್ಕೆ ಎರಡು ಕಡೆ ಗ್ರಾಮ ಒನ್‌ ಕೇಂದ್ರ ನೀಡಿದ್ದು, ಅರಾಭಿಕೊತ್ತನೂರಿನಲ್ಲಿ ಇನ್ನೂ ಲಾಗಿನ್‌ ಐಡಿ ನೀಡಿಲ್ಲ. ಮಧು ಎಂಬುವರು ಈ ಕೇಂದ್ರ ನೋಡಿಕೊಳ್ಳುತ್ತಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿದ್ದು, ಇನ್ನು ಎರಡು ದಿನಗಳಲ್ಲಿ ವ್ಯವಸ್ಥೆ ಆಗಲಿದೆ ಎಂಬ ಭರವಸೆ ನೀಡಿದ್ದಾರೆ. ಮಂಗಸಂದ್ರದಲ್ಲಿ ಇನ್ನೊಂದು ಕೇಂದ್ರವಿದ್ದು, ಅಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು’ ಎಂದು ಗ್ರಾಮ ಲೆಕ್ಕಿಗರಾದ ಅನಿತಾ ತಿಳಿಸಿದರು.

ADVERTISEMENT

ಆದರೆ, ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಸಮಸ್ಯೆ ಉದ್ಭವಿಸಿದ್ದು, ಇಲ್ಲಿಂದ ನೋಂದಣಿಗೆ ಮಂಗಸಂದ್ರ ಗ್ರಾಮಕ್ಕೆ ಹೋಗಲಾರೆವು. ಇಲ್ಲಿಯೇ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

ಇನ್ನು ಕೆಲವು ಕಡೆ ಸರ್ವರ್‌ ಸಮಸ್ಯೆ ಮುಂದುವರಿದಿದೆ. ಅರ್ಜಿ ಸಲ್ಲಿಕೆಗೆ ಕರ್ನಾಟಕ ಒನ್, ಗ್ರಾಮ ಒನ್‌, ಬಾಪೂಜಿ ಸೇವಾ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಕೇಂದ್ರಕ್ಕೆ ದಿನವೊಂದಕ್ಕೆ 60 ಅರ್ಜಿ ಸ್ವೀಕಾರದ ಗುರಿ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.