ADVERTISEMENT

ಮಾಲೂರು | ಅವಸಾನದತ್ತ ಹಳ್ಳಿಕಾರ್ ತಳಿ

ಜೋಡೆತ್ತು ಸಾಕಿದತಾಲ್ಲೂಕಿನ ಕ್ಷೇತ್ರಹಳ್ಳಿಯ ರೈತ ವೆಂಕಟೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 4:17 IST
Last Updated 19 ಅಕ್ಟೋಬರ್ 2025, 4:17 IST
ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಗ್ರಾಮದ ರೈತ ಕೆ.ವೆಂಕಟೇಶ್ ಅವರು ₹20 ಲಕ್ಷ ಬೆಲೆಯ ಹಳ್ಳಿಕಾರ್ ಎತ್ತುಗಳನ್ನು ಸಾಕಾಣಿಕೆ ಮಾಡಿರುವುದು

ಮಾಲೂರು: ಹಳ್ಳಿಕಾರ್ ಹಸುಗಳ ತಳಿಯು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿಯ ರೈತ ವೆಂಕಟೇಶ್ ಅವರು ಹಳ್ಳಿಕಾರ್ ತಳಿಯ ಹೋರಿಗಳನ್ನು ಸಾಕುತ್ತಿದ್ದಾರೆ. 

ಆಧುನಿಕ ಯುಗದ ಭರಾಟೆಯಲ್ಲಿ ರೈತರು ತಮ್ಮ ಹೊಲ, ಗದ್ದೆಗಳನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ಬಳಸುತ್ತಿದ್ದು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ರೈತ ವೆಂಕಟೇಶ್ ಅವರು ಇಂದಿಗೂ ಮೂರು ಜೋಡಿ ಹಳ್ಳಿಕಾರ್ ಎತ್ತುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. 

ದೇಶದ ಉತ್ತಮ ಉಳುಮೆ ಯೋಗ್ಯ ತಳಿಯಾಗಿರುವ ಹಳ್ಳಿಕಾರ್ ತಳಿಯು ನಶಿಸಿ ಹೋಗುತ್ತಿದೆ. ಹಳ್ಳಿಕಾರ್ ತಳಿಯ ರಾಸುಗಳು ಕಡಿಮೆಯಾಗುತ್ತಿವೆ. ದುಡಿಮೆ, ಹೊರೆ ಎಳೆಯುವುದಕ್ಕೆ ಈ ಎತ್ತುಗಳಿಗೆ ಸರಿಸಾಟಿಯಾಗಬಲ್ಲ ಯಾವುದೇ ತಳಿ ಇಲ್ಲ. ಈ ತಳಿಯ ರಾಸು ಚೆನ್ನಾಗಿ ಸಾಕಿದ್ದರೆ, ನೋಡುವುದೇ ಒಂದು ರೀತಿಯ ಸಂತೋಷ ಎನ್ನುತ್ತಾರೆ ಸ್ಥಳೀಯರು. 

ADVERTISEMENT

ಇಂಥ ತಳಿಯ ಎತ್ತುಗಳು ಕಣ್ಮರೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಸುಮಾರು ₹32 ಲಕ್ಷ ವೆಚ್ಚ ಮಾಡಿ ಮೂರು ಜೋಡಿ ಹಳ್ಳಿಕಾರ್ ಎತ್ತುಗಳನ್ನು ಸಾಕುತ್ತಿರುವುದಾಗಿ ರೈತ ವೆಂಕಟೇಶ್ ತಿಳಿಸಿದರು. 

ಹಳ್ಳಿಕಾರ್ ಹೋರಿ ಸಂವರ್ಧಕ ಎತ್ತುಗಳನ್ನು ಬೆಸಾಯ ಮತ್ತು ಸರಕು ಸಾಗಣೆಗೆ ಬಳಸುವುದಿಲ್ಲ. ಇವುಗಳನ್ನು ತಳಿ ಸಂವರ್ಧನೆಗೆ ಮಾತ್ರ ಬಳಸಲಾಗುತ್ತದೆ. ಬಹಳ ಮುತುವರ್ಜಿ ವಹಿಸಿ, ಹೋರಿಗಳನ್ನು ಸಾಕಾಣಿಕೆ ಮಾಡಲಾಗುವುದು. ಉಳಿದ ಕೆಲವು ಎತ್ತುಗಳನ್ನು ಜಾತ್ರೆಗಳಲ್ಲಿ ನಡೆಯುವ ಪ್ರದರ್ಶನಕ್ಕೆ ಬಳಸಲಾಗುತ್ತದೆ. ಹಳ್ಳಿಕಾರ್ ತಳಿ ಸಾಕಾಣಿಕೆ– ಹಳ್ಳಿಕಾರ್ ತಳಿಯ ಕರುವಿಗೆ ಕಡಲೆ ಹಿಂಡಿ, ಬೂಸಾ, ಜೋಳ, ಹಾಲು, ಮೊಟ್ಟೆ, ಹಸಿರು ಹುಲ್ಲು ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ನೀಡಿ ಕರುವನ್ನು ಸದೃಢ ಹಾಗೂ ಆರೋಗ್ಯಯುತವಾಗುವಂತೆ ಮಾಡಲಾಗುವುದು.

ಸಂವರ್ಧನಕ್ಕೆ ಎರಡು ಹಲ್ಲು ಹಾಕಿರುವ ಸುಮಾರು ₹20 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳನ್ನು ಸಾಕಲಾಗಿದೆ. ಉಳಿದಂತೆ ಸುಮಾರು ₹12 ಲಕ್ಷ ಬೆಲೆಯ ಹಲ್ಲು ಹಾಕದ ಎರಡು ಜೋಡಿ ಎತ್ತುಗಳನ್ನು ಸಾಕಾಣಿಕೆ ಮಾಡುತ್ತಿರುವುದಾಗಿ ಹೇಳಿದರು. [HEADLINE]

ಮಾಲೂರು | ಅವಸಾನದತ್ತ ಹಳ್ಳಿಕಾರ್ ತಳಿ

[BODY]

ಮಾಲೂರು: ಹಳ್ಳಿಕಾರ್ ಹಸುಗಳ ತಳಿಯು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿಯ ರೈತ ವೆಂಕಟೇಶ್ ಅವರು ಹಳ್ಳಿಕಾರ್ ತಳಿಯ ಹೋರಿಗಳನ್ನು ಸಾಕುತ್ತಿದ್ದಾರೆ.

ಆಧುನಿಕ ಯುಗದ ಭರಾಟೆಯಲ್ಲಿ ರೈತರು ತಮ್ಮ ಹೊಲ, ಗದ್ದೆಗಳನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ಬಳಸುತ್ತಿದ್ದು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ರೈತ ವೆಂಕಟೇಶ್ ಅವರು ಇಂದಿಗೂ ಮೂರು ಜೋಡಿ ಹಳ್ಳಿಕಾರ್ ಎತ್ತುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.

ದೇಶದ ಉತ್ತಮ ಉಳುಮೆ ಯೋಗ್ಯ ತಳಿಯಾಗಿರುವ ಹಳ್ಳಿಕಾರ್ ತಳಿಯು ನಶಿಸಿ ಹೋಗುತ್ತಿದೆ. ಹಳ್ಳಿಕಾರ್ ತಳಿಯ ರಾಸುಗಳು ಕಡಿಮೆಯಾಗುತ್ತಿವೆ. ದುಡಿಮೆ, ಹೊರೆ ಎಳೆಯುವುದಕ್ಕೆ ಈ ಎತ್ತುಗಳಿಗೆ ಸರಿಸಾಟಿಯಾಗಬಲ್ಲ ಯಾವುದೇ ತಳಿ ಇಲ್ಲ. ಈ ತಳಿಯ ರಾಸು ಚೆನ್ನಾಗಿ ಸಾಕಿದ್ದರೆ, ನೋಡುವುದೇ ಒಂದು ರೀತಿಯ ಸಂತೋಷ ಎನ್ನುತ್ತಾರೆ ಸ್ಥಳೀಯರು.

ಇಂಥ ತಳಿಯ ಎತ್ತುಗಳು ಕಣ್ಮರೆಯಾಗಲು ಬಿಡಬಾರದು ಎಂಬ ಕಾರಣಕ್ಕೆ ಸುಮಾರು ₹32 ಲಕ್ಷ ವೆಚ್ಚ ಮಾಡಿ ಮೂರು ಜೋಡಿ ಹಳ್ಳಿಕಾರ್ ಎತ್ತುಗಳನ್ನು ಸಾಕುತ್ತಿರುವುದಾಗಿ ರೈತ ವೆಂಕಟೇಶ್ ತಿಳಿಸಿದರು.

ಹಳ್ಳಿಕಾರ್ ಹೋರಿ ಸಂವರ್ಧಕ ಎತ್ತುಗಳನ್ನು ಬೆಸಾಯ ಮತ್ತು ಸರಕು ಸಾಗಣೆಗೆ ಬಳಸುವುದಿಲ್ಲ. ಇವುಗಳನ್ನು ತಳಿ ಸಂವರ್ಧನೆಗೆ ಮಾತ್ರ ಬಳಸಲಾಗುತ್ತದೆ. ಬಹಳ ಮುತುವರ್ಜಿ ವಹಿಸಿ, ಹೋರಿಗಳನ್ನು ಸಾಕಾಣಿಕೆ ಮಾಡಲಾಗುವುದು. ಉಳಿದ ಕೆಲವು ಎತ್ತುಗಳನ್ನು ಜಾತ್ರೆಗಳಲ್ಲಿ ನಡೆಯುವ ಪ್ರದರ್ಶನಕ್ಕೆ ಬಳಸಲಾಗುತ್ತದೆ. ಹಳ್ಳಿಕಾರ್ ತಳಿ ಸಾಕಾಣಿಕೆ– ಹಳ್ಳಿಕಾರ್ ತಳಿಯ ಕರುವಿಗೆ ಕಡಲೆ ಹಿಂಡಿ, ಬೂಸಾ, ಜೋಳ, ಹಾಲು, ಮೊಟ್ಟೆ, ಹಸಿರು ಹುಲ್ಲು ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ನೀಡಿ ಕರುವನ್ನು ಸದೃಢ ಹಾಗೂ ಆರೋಗ್ಯಯುತವಾಗುವಂತೆ ಮಾಡಲಾಗುವುದು.

ಸಂವರ್ಧನಕ್ಕೆ ಎರಡು ಹಲ್ಲು ಹಾಕಿರುವ ಸುಮಾರು ₹20 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳನ್ನು ಸಾಕಲಾಗಿದೆ. ಉಳಿದಂತೆ ಸುಮಾರು ₹12 ಲಕ್ಷ ಬೆಲೆಯ ಹಲ್ಲು ಹಾಕದ ಎರಡು ಜೋಡಿ ಎತ್ತುಗಳನ್ನು ಸಾಕಾಣಿಕೆ ಮಾಡುತ್ತಿರುವುದಾಗಿ ಹೇಳಿದರು.

ನಮ್ಮ ತಾತ, ಮುತ್ತಾತನ ಕಾಲದಿಂದಲೂ ನಮ್ಮದು ಕೃಷಿಯೇ ಕುಲಕಸುಬು. 89 ವರ್ಷದ ನನ್ನ ತಂದೆ ಅವರಿಗೆ ಹಳ್ಳಿಕಾರ್ ಹಸುಗಳು ಮತ್ತು ಹೋರಿಗಳ ಸಾಕಾಣಿಕೆ ಮೇಲೆ ಹೆಚ್ಚು ಒಲುಮೆ. ಹಳ್ಳಿಕಾರ್ ತಳಿಯ ಹೋರಿಗಳ ಸಾಕಾಣಿಕೆಗೆ ನಮಗೆ ಅವರೇ ಪ್ರೇರಣೆ. ನಮ್ಮ ಕುಟುಂಬಕ್ಕೆ ಹಳ್ಳಿಕಾರ್ ತಳಿ ಹಸುಗಳು ಲಕ್ಷ್ಮಿ ಇದ್ದಂತೆ. ಅಲ್ಲದೆ ಮುರ್‍ರಾ ತಳಿಯ ಹೆಮ್ಮೆಗಳನ್ನು ಸಾಕುತ್ತಿದ್ದೇವೆ ಎಂದು ರೈತ ವೆಂಕಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.