ADVERTISEMENT

ಕೆಜಿಎಫ್ ತಾಲ್ಲೂಕಿನಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:25 IST
Last Updated 5 ಮೇ 2022, 2:25 IST
ಕೆಜಿಎಫ್ ತಾಲ್ಲೂಕಿನ ಮಾರಿಕುಪ್ಪ ಗ್ರಾಮದ ಬಳಿ ಬುಧವಾರ ಬಿದ್ದ ಮಳೆಗೆ ಕೃಷಿ ಭೂಮಿ ತೇವಗೊಂಡಿರುವುದು
ಕೆಜಿಎಫ್ ತಾಲ್ಲೂಕಿನ ಮಾರಿಕುಪ್ಪ ಗ್ರಾಮದ ಬಳಿ ಬುಧವಾರ ಬಿದ್ದ ಮಳೆಗೆ ಕೃಷಿ ಭೂಮಿ ತೇವಗೊಂಡಿರುವುದು   

ಕೆಜಿಎಫ್‌: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆ ಬಿರುಗಾಳಿ ಸಮೇತ ಭಾರಿ ಮಳೆ ಬಿದ್ದಿದೆ.

ಕಳೆದ ಎರಡು– ಮೂರು ದಿನಗಳಲ್ಲಿ ಅಲ್ಲಲ್ಲಿ ಸಣ್ಣದಾಗಿ ಬಿದ್ದಿದ್ದ ಮಳೆ, ಬಿರುಗಾಳಿ ಸಮೇತ ಸುರಿದಿದ್ದರಿಂದ ಮಾವಿನ ಕಾಯಿ ಬೆಳೆಗೆ ನಷ್ಟವುಂಟಾಗಿರುವ ಸಂಭವ ಹೆಚ್ಚಾಗಿದೆ.

ಅಲ್ಲಲ್ಲಿ ಮರಗಳ ಕೊಂಬೆಗಳು ನೆಲಕ್ಕೆ ಬಿದ್ದಿವೆ. ರಭಸವಾಗಿ ಬಿದ್ದ ಮಳೆಯಿಂದ ಬಿಸಿಲಿಗೆ ಒಣಗಿದ್ದ ಸಣ್ಣಪುಟ್ಟ ಕುಂಟೆಗಳಿಗೆ ನೀರು ಬಂದಿದೆ. ಮಾರಿಕುಪ್ಪ ಗ್ರಾಮದ ಬಳಿಯ ಶಿವಸಾಗರ ಕೆರೆಗೆ ರಾಜಕಾಲುವೆಯಿಂದ ನೀರು ಕೂಡ ಹರಿದುಬಂದಿತು. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಸುಂದರಪಾಳ್ಯದಲ್ಲಿ ಸುಮಾರು ಒಂದೂಕಾಲು ಗಂಟೆ ಕಾಲ ಮಳೆ ಸುರಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.