
ಮುಳಬಾಗಿಲು: ನಗರದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಶೋಭಯಾತ್ರೆ ಕಾರ್ಯಕ್ರಮ ಸಾವಿರಾರು ಮಂದಿ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ನಗರದ ಎಲ್ಲೆಡೆ ಕೇಸರಿ ಬಾವುಟ, ತೋರಣ ಮತ್ತು ಭಾರಿ ಬ್ಯಾನರ್‌ಗಳು ಕಂಡು ಬಂದವು.
‘ಜೈ ಶ್ರೀರಾಮ್’, ‘ಜೈಬಜರಂಗ ಬಲಿ’, ಹಿಂದೂ ನಾವೆಲ್ಲಾ ಒಂದು’ ಎಂಬ ಘೋಷಣೆ ಮೊಳಗಿದವು.
ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಶೋಭಯಾತ್ರೆಗೆ ಚಾಲನೆ ನೀಡಿದರು.
ಸೋಮೇಶ್ವರಪಾಳ್ಯದಿಂದ ಪ್ರಾರಂಭವಾದ ಶೋಭಯಾತ್ರೆಯಲ್ಲಿ ಭಾರತಾಂಬೆ, ಶ್ರೀರಾಮ ಮತ್ತು ಸೀತಾಮಾತೆ ಪ್ರತಿಮೆಗಳನ್ನು ಪುಷ್ಪ ಪಲ್ಲಕ್ಕಿಗಳಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಪೂರ್ಣ ಕಲಶ ಹೊತ್ತು ನೇತೃತ್ವ ವಹಿಸಿದ್ದರು. ಮೆರವಣಿಗೆ ಶ್ರೀನಿವಾಸಪುರ ವೃತ್ತ, ವಿಠಲೇಶ್ವರಪಾಳ್ಯ ವೃತ್ತ, ಮಾರುತಿ ಶಾಲೆ ವೃತ್ತ, ಬಜಾರ್ ರಸ್ತೆ, ಮುತ್ಯಾಲಪೇಟೆ ವೃತ್ತ, ಡಿವಿಜಿ ವೃತ್ತ, ಕೆಇಬಿ ಸರ್ಕಲ್ ಮೂಲಕ ಸಾಗಿ ನೇತಾಜಿ ಕ್ರೀಡಾಂಗಣ ತಲುಪಿತು.
ಕೇರಳ ವಾದ್ಯ ಮತ್ತು ತಮಟೆ ಸಂಗೀತಕ್ಕೆ ಜನರು ನೃತ್ಯ ಮಾಡಿದರು. ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಎ.ಎಸ್.ಪಿ ಮನಿಷಾ, ಸರ್ಕಲ್ ಇನ್ ಸ್ಟೆಕ್ಟರ್ ಸತೀಶ್ ಕುಮಾರ್ ಮತ್ತು ನಗರ ಠಾಣೆ ಇನ್ ಸ್ಪೆಕ್ಟರ್ ಅಣ್ಣಯ್ಯ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಮುಳಬಾಗಿಲು: ನಗರದಲ್ಲಿ ಭಾನುವಾರ ಹಿಂದೂ ಸಮಾಜೋತ್ಸವ ಹಾಗೂ ಶೋಭಯಾತ್ರೆ ಕಾರ್ಯಕ್ರಮಗಳು ಸಾವಿರಾರು ಮಂದಿ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ನಗರದಲ್ಲಿ ಎಲ್ಲಿ ನೋಡಿದರೂ ಕೇಸರಿಮಯವಾದ ಬಾವುಟಗಳು, ತೋರಣಗಳು, ಭಾರೀ ಗಾತ್ರದ ಬ್ಯಾನರುಗಳು ರಾರಾಜಿಸುತ್ತಿದ್ದರೆ ಇಡೀ ನಗರದಲ್ಲಿ ಚಿಕ್ಕಮಕ್ಕಳು, ಮಹಿಳೆಯರು, ಯುವಕರು ಹಾಗೂ ಯುವತಿಯರು ಯಾವುದೇ ಮುಜಗರವಿಲ್ಲದೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಏಕತೆಯ ಸಂದೇಶದ ಘೋಷಣೆಗಳನ್ನು ಕೂಗಿದರು. ಬಹುತೇಕ ಮಂದಿ ಕೇಸರಿ ಶಾಲುಗಳನ್ನು ಹಾಗೂ ಟವಲುಗಳನ್ನು ಭುಜಗಳು ಹಾಗೂ ತಲೆಯ ಮೇಲೆ ಪೇಟದ ರೀತಿಯಲ್ಲಿ ಸುತ್ತಿಕೊಂಡು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.
ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಶೋಭಯಾತ್ರೆಗೆ ಚಾಲನೆ ನೀಡಿದರು.
ನಗರದ ಸೋಮೇಶ್ವರ ಪಾಳ್ಯದಲ್ಲಿ ಪ್ರಾರಂಭವಾದ ಶೋಭಯಾತ್ರೆ ಭಾರತಾಂಬೆ, ಶ್ರೀರಾಮ, ಸೀತಾಮಾತೆಯ ಪ್ರತಿಮೆಗಳನ್ನು ಪುಷ್ಪ ಪಲ್ಲಕ್ಕಿಗಳಲ್ಲಿ ಕೂರಿಸಿ ಮೆರವಣಿಗೆಯ ಮುಂಭಾಗದಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಶಗಳನ್ನು ಹೊತ್ತು ನಗರದ ಶ್ರೀನಿವಾಸಪುರ ವೃತ್ತ, ವಿಠಲೇಶ್ವರ ಪಾಳ್ಯದ ವೃತ್ತ, ಮಾರುತಿ ಶಾಲೆ ವೃತ್ತ, ಬಜಾರು ರಸ್ತೆ, ಮುತ್ಯಾಲ ಪೇಟೆ ವೃತ್ತ, ಡಿವಿಜಿ ವೃತ್ತ, ಕೆಇಬಿ ಸರ್ಕಲ್ ಮೂಲಕ ನೇತಾಜಿ ಕ್ರೀಡಾಂಗಣದವರೆಗೂ ಶೋಭ ಯಾತ್ರೆ ಮೆರವಣಿಗೆ ನಡೆಸಿದರು.
ಮೆರವಣಿಗೆಯ ಉದ್ದಕ್ಕೂ ವಾದ್ಯ ಗೋಷ್ಟಿಗಳಿಗೆ ಅನುಸಾರವಾಗಿ ಜೈ ಶ್ರೀರಾಮ್, ಜೈ ಭಜರಂಗಬಲಿ, ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆಗಳನ್ನು ಕೂಗುತ್ತಾ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರೆ, ಮೆರವಣಿಗೆಯ ಉದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ ಮಹಿಳೆಯರು ಹಾಗೂ ಯುವಕರು ಶೋಭಯಾತ್ರಧಾರಿಗಳ ಮೇಲೆ ಗುಲಾಬಿ, ಚೆಂಡು ಹೂ, ಸೇವಂತಿಗೆ, ಕನಕಾಂಬರ ಮತ್ತಿತರರ ಹೂಗಳ ಸುರಿಮಳೆ ಗೆರೆದರು.
ಮೆರವಣಿಗೆಯ ಉದ್ದಕ್ಕೂ ಚಿಕ್ಕಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೂ ಹಾಗೂ ಯುವತಿಯರು ಮಹಿಳೆಯರು ತಮಟೆಗಳು ಹಾಗೂ ಕೇರಳ ವಾದ್ಯಗಳ ಸಂಗೀತಕ್ಕೆ ಅನುಸಾರವಾಗಿ ನೃತ್ಯ ಮಾಡಿ ಎಲ್ಲರನ್ನೂ ಆಕರ್ಷಿಸಿದರೆ, ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಹುರುಪು ತುಂಬಿತು.
ಇನ್ನು ಮೆರವಣಿಗೆ ಸಾಗಿದ ರಸ್ತೆಗಳ ಉದ್ದಕ್ಕೂ ಅಂಗಡಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದದ್ದು ವಿಶೇಷವಾಗಿತ್ತು.ಮೆರವಣಿಗೆಯ ಉದ್ದಕ್ಕೂ ಭಾರೀ ಗಾತ್ರದ ರಾಮ, ಸೀತೆ, ಹನುಮಾನ್ ಮತ್ತಿತರರ ಚಿತ್ರಗಳುಲ್ಲ ಬಾವುಟಗಳನ್ನು ಬೀಸುತ್ತಾ ಯುವಕರು ಮುಂದೆ ಸಾಗುತ್ತಿದ್ದರೆ, ವಯಸ್ಸಿನ ಅರಿವೇ ಇಲ್ಲದಂತೆ ಉತ್ಸಾಹದಿಂದ ಎಲ್ಲರೂ ನೃತ್ಯ ಮಾಡುತ್ತಾ ಸಾಗಿದರು.
ಇನ್ನು ಮೆರವಣಿಗೆಯ ಉದ್ದಕ್ಕೂ ಗ್ರಾಮೀಣ ಸೊಗಡಿನ ಕೋಲಾಟ ಹಾಗೂ ಮಹಿಳೆಯರು ನಾದ ಸ್ವರಗಳನ್ನು ಊದುತ್ತಾ ಮುಂದೆ ಮುಂದೆ ಸಾಗುತ್ತಿದ್ದ ದೃಶ್ಯಗಳು ಉದ್ದಕ್ಕೂ ಕಂಡುಬಂದವು.ಕೆಲವರು ಮನೆಗಳ ಚಾವಣಿಯ ಮೇಲೆ ನಿಂತು ಮೆರವಣಿಗೆಯ ದೃಶ್ಯಗಳನ್ನು ಮೊಬೈಲುಗಳಲ್ಲಿ ಸೆರೆಹಿಡಿಯುತ್ತಾ, ಪಲ್ಲಕ್ಕಿಗಳು ಕಾಣುವಂತೆ ಸೆಲ್ಫೀಗಳನ್ನು ತೆಗೆದುಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.
ಮೆರವಣಿಗೆಯ ಉದ್ದಕ್ಕೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಎ. ಎಸ್.ಪಿ ಮನಿಷಾ, ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್, ನಗರ ಠಾಣೆ ಇನ್ ಸ್ಪೆಕ್ಟರ್ ಅಣ್ಣಯ್ಯ ಮೆರವಣಿಗೆದಾರರು ಒಂದೇ ಕಡೆ ಇರದೆ ಸಾಗುವಂತೆ ಸೂಚಿಸುತ್ತಾ ಸೂಕ್ತವಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ನಂತರ ನಗರದ ನೇತಾಜಿ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತಲೇ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.