ADVERTISEMENT

ನಾನು ಕಾಂಗ್ರೆಸ್ ಸೇರಲು ಸಿದ್ಧ ಸಿದ್ಧರಾಮಯ್ಯ ಬಿಡುತ್ತಿಲ್ಲ: ವರ್ತೂರು ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 13:02 IST
Last Updated 30 ನವೆಂಬರ್ 2019, 13:02 IST

ಕೋಲಾರ: ‘ಸಿದ್ದರಾಮಯ್ಯ ಕುರುಬರನ್ನು ಹಾಗೂ ಕುಮಾರಸ್ವಾಮಿ ಒಕ್ಕಲಿಗರನ್ನು ಬೆಳೆಯಲು ಬಿಡುವುದಿಲ್ಲ, ಇವರನ್ನು ನಂಬಿಕೊಂಡವರು ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ’ ಎಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಕಾಂಗ್ರೆಸ್ಸಿಗೆ ಹೋಗಲು ಸಿದ್ದವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ನನ್ನಿಂದ ಕಾಂಗ್ರೆಸ್ಸಿಗೆ ಇರುವ ಲಾಭದ ಬಗ್ಗೆ ಮರೆತಿದ್ದಾರೆ’ ಎಂದು ದೂರಿದರು.

‘ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡರೆ ರಾಜ್ಯದಲ್ಲಿ 150 ಸ್ಥಾನ ದೊರೆಯುತ್ತದೆ. ಇಲ್ಲದಿದ್ದರೆ 100 ಸ್ಥಾನ ಸಹ ಸಿಗುವುದಿಲ್ಲ, ಕಾಂಗ್ರೆಸ್‌ಗಿಂತ ಬಿಜೆಪಿ ಜತೆ ನನ್ನ ಸಂಬಂಧ ಚೆನ್ನಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದಿಂದ ೫ ಶಾಸಕರನ್ನು ಗೆಲ್ಲಿಸಿಕೊಂಡಿದ್ದರೆ ನಾನೇ ಮುಖ್ಯಮಂತ್ರಿ ಆಗ್ತಿದ್ದೆ’ ಎಂದರು.

ADVERTISEMENT

‘ಮಾಜಿ ಶಾಸಕ ಆಗಿರೋದರಿಂದ ತೊಡೆ ತಟ್ಟುವ ಶಕ್ತಿ ನನಗಿಲ್ಲ. ಈಗ ಮಾತನಾಡಿದರೂ ಪ್ರಯೋಜನವಿಲ್ಲ. ಆದರೆ ಇನ್ನು ತಪ್ಪು ಮಾಡಲು ಹೋಗಬೇಡಿ ಎಂದು ಶಾಸಕ ಶ್ರೀನಿವಾಸಗೌಡರಿಗೆ ಕಿವಿ ಮಾತು ಹೇಳಿದ, ಅವರು ನನ್ನದೇ ತಪ್ಪಿನಿಂದ ಸೋತಿದ್ದೇನೆ, ಅದರೂ ಜನ ಕೈಬಿಟ್ಟಿಲ್ಲ, ಮುಂದಿನ ಚುನಾವಣೆಯಲ್ಲಿ ೫೦ ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ತಿನಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.