ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಗುಂಟಿಪಲ್ಲಿ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಗಿಡಗಂಟಿ ತೆಗೆದು ಸ್ವಚ್ಛಗೊಳಿಸುವ ಟೆಂಡರ್ ನೀಡಿದ್ದು, ಬೃಹದಾಕಾರವಾಗಿ ಬೆಳೆದ ನೀಲಗಿರಿ ಮರಗಳನ್ನು ಕಡಿದಿರುವುದು ಕಂಡುಬಂದಿದೆ.
ಮರದ ದಿಮ್ಮಿಗಳನ್ನು ಜೆಸಿಬಿಗಳ ಮೂಲಕ ಲಾರಿಗಳಿಗೆ ತುಂಬಿಸಿ ಸಾಗಾಟ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ನೂರಾರು ನೀಲಗಿರಿ ಮರ ಕಡಿದು ಮಾರಾಟ ಮಾಡುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನಿದೆ ಎಂದು ದೂರಿದ್ದಾರೆ.
ಅರಣ್ಯ ಒತ್ತುವರಿ ಆಗಲು ಬಿಡುವುದಿಲ್ಲ ಎಂದು ರೈತರ ಜಮೀನುಗಳಿಗೆ ಜೆಸಿಬಿ ನುಗ್ಗಿಸಿ ಬೆಳೆ ನಾಶ ಮಾಡಿದ್ದ ಅರಣ್ಯಾಧಿಕಾರಿಗಳು ಈಗ ಏಕೆ ಸುಮ್ಮನಿದ್ದಾರೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.