ADVERTISEMENT

ವರದೇನಹಳ್ಳಿ ಹಾಲು ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 9:59 IST
Last Updated 27 ನವೆಂಬರ್ 2019, 9:59 IST
ಕೋಲಾರ ತಾಲ್ಲೂಕಿನ ವರದೇನಹಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿದ ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ಹಾಲಿನ ಗುಣಮಟ್ಟ ಪರಿಶೀಲಿಸಿದರು.
ಕೋಲಾರ ತಾಲ್ಲೂಕಿನ ವರದೇನಹಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿದ ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್ ಹಾಲಿನ ಗುಣಮಟ್ಟ ಪರಿಶೀಲಿಸಿದರು.   

ಕೋಲಾರ: ತಾಲ್ಲೂಕಿನ ವರದೇನಹಳ್ಳಿ ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನುಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಬುಧವಾರ ಉದ್ಘಾಟಿಸಿದರು.

‘ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸಂಘಗಳ ಮೂಲಕ ರೈತರಿಗೆ ತಲುಪಿಸಲಾಗುತ್ತದೆ. ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸಬೇಕು. ಆರಂಭದಿಂದಲೇ ಹಾಲಿನಲ್ಲಿ ಎಸ್‌ಎನ್‌ಎಫ್‌ ಪ್ರಮಾಣ ಪರೀಕ್ಷಿಸಿ ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದು ಹರೀಶ್‌ ತಿಳಿಸಿದರು.

ಹಾಲಿನ ಮಹತ್ವ ಮತ್ತು ಜೈವಿಕ ಗುಣಮಟ್ಟ ಕುರಿತು ಮಾತನಾಡಿದ ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ‘ಉತ್ಪಾದಕರು ಸಂಘಕ್ಕೆ ಗುಣಮಟ್ಟದ ಹಾಲು ನೀಡುವುದರಿಂದ ಸಂಘದ ಮತ್ತು ಉತ್ಪಾದಕರ ಸರ್ವತ್ತೋಮುಖ ಅಭಿವೃದ್ಧಿಯಾಗುತ್ತದೆ. ರಾಸುಗಳಿಗೆ ಪ್ರತಿ ವರ್ಷ ಗುಂಪು ವಿಮೆ, ಕಾಲುಬಾಯಿ ಲಸಿಕೆ, ಕೋಚಿಮುಲ್ ವಿಮೆ ಮಾಡಿಸಬೇಕು’ ಎಂದು ಹೇಳಿದರು.

ADVERTISEMENT

ಸಂಘದ ಅಧ್ಯಕ್ಷ ನಂಜುಂಡಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಹಾಲು ಉತ್ಪಾದಕರು ಮತ್ತು ಶಿಬಿರ ವಿಸ್ತರಣಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.