ADVERTISEMENT

ಗೋಶಾಲೆ ನಿರ್ಮಾಣಕ್ಕೆ ಪರಗೋಡು ಬಳಿ ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 4:16 IST
Last Updated 22 ಸೆಪ್ಟೆಂಬರ್ 2022, 4:16 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯ ಮಹಾವೀರ್ ಜೈನ್ ಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಛದ್ಮವೇಷಧಾರಿ ಮಕ್ಕಳು
ಕೆಜಿಎಫ್‌ ರಾಬರ್ಟಸನ್‌ಪೇಟೆಯ ಮಹಾವೀರ್ ಜೈನ್ ಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಛದ್ಮವೇಷಧಾರಿ ಮಕ್ಕಳು   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕು ಪರಗೋಡು ಚಿತ್ರಾವತಿ ಜಲಾಶಯದ ಬಳಿ ಗೋಶಾಲೆ ನಿರ್ಮಾಣಕ್ಕೆ ಮಂಗಳವಾರ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಪಶುಸಂಗೋಪನಾ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ಪಿ.ಶ್ರೀನಿವಾಸ್, ಉಪನಿರ್ದೇಶಕ ಡಾ.ರವಿ ಮತ್ತಿತರರು ಪರಿಶೀಲನಾ ತಂಡದಲ್ಲಿ ಇದ್ದರು.

ಈ ಜಾಗವು ಬೆಟ್ಟದ ಸಮೀಪವಿದ್ದು, ಜಾಗ ವನ್ನು ಸಮತಟ್ಟು ಮಾಡಿದರೆ ಗೋಶಾಲೆ ನಿರ್ಮಾಣಕ್ಕೆ ಉತ್ತಮ ಸ್ಥಳವಾಗಲಿದೆ ಎಂದು ಅಧಿಕಾರಿ ಗಳು ಅಭಿಪ್ರಾಯಪಟ್ಟರು. ಇದಕ್ಕೂ ಮೊದಲು ಅಧಿಕಾರಿಗಳು ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಹೋಬಳಿ ನಾಗರೆಡ್ಡಿಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಗೋಶಾಲೆ ಕಾಮಗಾರಿಯನ್ನು ಪರಿಶೀಲಿಸಿದರು.

ADVERTISEMENT

ನಾಗಿರೆಡ್ಡಿಹಳ್ಳಿ ಸರ್ವೆ ನಂಬರ್ 41ರ 10 ಎಕರೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಚಾಲನೆ ದೊರೆತು ಒಂದು ವರ್ಷ ಸಮೀಪಿಸುತ್ತಿದೆ. ಆದರೆ ಇಂದಿಗೂ ಕಾರ್ಯಾರಂಭವಾಗಿಲ್ಲ. ಮಳೆ ಮತ್ತು ಜೌಗು ಕಾರಣ ಕಾಮಗಾರಿಗಳಿಗೆ ತೊಂದರೆ ಆಗಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಶ್ರೀನಿವಾಸ್ ಅವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.