ಮುಳಬಾಗಿಲು: ಚುಟುಕು ಸಾಹಿತ್ಯ ರಚನೆ ಮತ್ತು ವಾಚನ ಮಾಡುವುದರಿಂದ ಮನಸ್ಸಿಗೆ ಆಹ್ಲಾದ ಹಾಗೂ ನೆಮ್ಮದಿ ಸಿಗುತ್ತದೆ. ಚುಟುಕು ಸಾಹಿತಿಗಳಿಗೆ ವೇದಿಕೆ ಕಲ್ಪಿಸಿ ಕೊಡುವ ಸಲುವಾಗಿ ಹೆಚ್ಚು ಕಾರ್ಯಕ್ರಮ ನಡೆಯಬೇಕು ಎಂದು ಚುಸಾಪ ತಾಲ್ಲೂಕು ಅಧ್ಯಕ್ಷೆ ಕಿನ್ನರಿ ಎನ್.ಸಿ.ರಾಜೇಶ್ವರಿ ಹೇಳಿದರು.
ಶನಿವಾರ ನಗರದಲ್ಲಿ ನಡೆದ ಮನೆ ಮನೆಯಲ್ಲಿ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುಟುಕು ಸಾಹಿತ್ಯ ಓದುಗನಿಗೆ ಬಹುಬೇಗ ಸಾಹಿತ್ಯದ ಸಂತೃಪ್ತಿ ನೀಡುತ್ತದೆ. ಚುಟುಕು ಕವಿಗಳು ಹೆಚ್ಚಾಗಿ ಸಾಹಿತ್ಯಕ್ಕೆ ಕಾಲಿಡಬೇಕು ಹಾಗೂ ಚುಟುಕು ಕವಿಗಳಿಗೆ ಪ್ರೋತ್ಸಾಹ ಸಿಗಬೇಕು ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಜಯರಾಮರೆಡ್ಡಿ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ಹೊರಗೆ ಬರಲು ಮನಸ್ಸು ನೆಮ್ಮದಿಯಿಂದ ಇರಲು ಚುಟುಕು ಕಾರ್ಯಕ್ರಮ ಸಹಕಾರಿ ಎಂದರು.
ಚುಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬ್ರಹ್ಮಯ್ಯ, ಯಾನಾದಹಳ್ಳಿ ನಾರಾಯಣಸ್ವಾಮಿ, ಚುಸಾಪ ಪ್ರಧಾನ ಕಾರ್ಯದರ್ಶಿ ಬ್ರಹ್ಮಯ್ಯ, ಉಪಾಧ್ಯಕ್ಷ ಯಾನಾದಹಳ್ಳಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಾಲು, ಸಾಂಸ್ಕೃತಿಕ ಕಾರ್ಯದರ್ಶಿ ಸುಲೋಚನಾ, ಆರ್.ಎನ್.ಪುಷ್ಪ, ಅಂಜಲಿದೇವಿ, ಕವಿತಾ, ಶಾರದ, ಶ್ವೇತಾ, ಉಮಾ, ವಿನುತ, ಸರಸ್ಪತಿ, ಯಶೋಧ, ಭಾಸ್ಕರ್, ಅತ್ತಿಕುಂಟೆ ಎಸ್.ಸುಬ್ರಮಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.