ADVERTISEMENT

ಭಾಷಾ ಸ್ವಾಭಿಮಾನ ಎತ್ತಿಹಿಡಿಯುವ ಹಬ್ಬ: ಶಾಸಕ ನಾರಾಯಣಸ್ವಾಮಿ

ಬಂಗಾರಪೇಟೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 6:36 IST
Last Updated 2 ನವೆಂಬರ್ 2025, 6:36 IST
ಬಂಗಾರಪೇಟೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಬಂಗಾರಪೇಟೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಬಂಗಾರಪೇಟೆ: ಪಟ್ಟಣದಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ತಹಶೀಲ್ದಾರ್ ಕೆ.ಎನ್.ಸುಜಾತ ಭಾಗವಹಿಸಿದ್ದರು.

ಶಾಸಕ ನಾರಾಯಣಸ್ವಾಮಿ, ‘ನಮ್ಮ ಅಸ್ಮಿತೆ ಮತ್ತು ಸ್ವಾಭಿಮಾನ ಎತ್ತಿ ಹಿಡಿಯುವ ಹೆಮ್ಮೆ ಹಬ್ಬ’. ಕನ್ನಡ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹೋರಾಟಗಾರರನ್ನು ಸ್ಮರಿಸುವ ದಿನವಿದು ಎಂದು ಹೇಳಿದರು.

ಕನ್ನಡ ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಗಳಲ್ಲೊಂದು. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಹಶೀಲ್ದಾರ್ ಸುಜಾತ, ರಾಜೋತ್ಸವವನ್ನು ‘ಆತ್ಮಾವಲೋಕನದ ದಿನ’ ಎಂದು ಬಣ್ಣಿಸಿದರು. ಜಾಗತೀಕರಣದ ಯುಗದಲ್ಲಿ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳನ್ನು ಮನದಟ್ಟು ಮಾಡಿಕೊಟ್ಟರು. ಭಾಷೆ ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಡಾ.ಪಲ್ಲವಿಮಣಿ, ಮುಂದಿನ ವರ್ಷ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಇತರ ಭಾಷಿಗರಿಗೆ ಮಾದರಿಯಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಬಂಗಾರಪೇಟೆ:ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹೋರಾಟಗಾರರನ್ನು ಮತ್ತು ಹಿರಿಯರನ್ನು ಸ್ಮರಿಸುವ ಮೂಲಕ ನಮ್ಮ ಅಸ್ಮಿತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವ ಹೆಮ್ಮೆಯ ಹಬ್ಬವಾಗಿದೆ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹೇಳಿದರು.

ನಗರದ ಪುರಸಭೆ ಕಚೇರಿ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ.ಇಂತಹದ್ದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡದ ಅಭಿಮಾನಿಗಳ ಶ್ರಮ,ತ್ಯಾಗ,ಬಲಿದಾನಗಳನ್ನು ಸ್ಮರಿಸುವ ದಿನ ಕೂಡ ಹೌದು,ಕನ್ನಡ ರಾಜ್ಯೋತ್ಸವ ಎನ್ನುವುದು ನಾಡು ನುಡಿ ಬಗ್ಗೆ ನಮಗಿರುವ ಬದ್ದತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು ಅಂದರು.

ನಮ್ಮ ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಉಸಿರು. ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಗಳಲ್ಲಿ ನಮ್ಮ ಕನ್ನಡವೂ ಒಂದು. ಇದಕ್ಕೆ ಎರಡು ಸಾವಿರ ವರ್ಷಗಳ ಹಿರಿಮೆ ಇದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು, ಭಾರತೀಯ ಸಾಹಿತ್ಯ ಲೋಕದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠಗಳನ್ನು ಗಳಿಸಿದ ಭಾಷೆ ಎಂಬ ಹೆಗ್ಗಳಿಕೆ ನಮ್ಮದು, ಎರಡೂ ರಾಜ್ಯಗಳ ಗಡಿ ಭಾಗದ ತಾಲ್ಲೂಕು ಆಗಿದ್ದರೂ ಸಹ ಕನ್ನಡ ಭಾಷೆ ಬೆಳೆವಣಿಗೆಗೆ ಯಾವುದೇ ದಕ್ಕೆ ಭಾರದಂತೆ ಎಲ್ಲಾ ಭಾಷಿಗರೂ ಒಂದಾಗಿ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲಾಗಿದೆ,ತಾಲ್ಲೂಕಿನಾದ್ಯಂತ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮೂಲಕ ವಲಸೆ‌ ಹೋಗಿರುವವರನ್ನು ಮರಳಿ ನಗರಕ್ಕೆ ಬರುವಂತೆ ಆಕರ್ಷಣೆಯಾಗಿ ನಗರವನ್ನು ಕಟ್ಟೋಣ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಕೆ ಎನ್ ಸುಜಾತ ಮಾತನಾಡಿ ರಾಜ್ಯೋತ್ಸವವನ್ನು ಕೇವಲ ಆಚರಣೆಯಾಗಿ ನೋಡಬಾರದು. ಇದು ಆತ್ಮಾವಲೋಕನದ ದಿನ. ಜಾಗತೀಕರಣದ ಈ ಯುಗದಲ್ಲಿ, ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ, ಕನ್ನಡಿಗರೇ ಕನ್ನಡದಲ್ಲಿ ಮಾತನಾಡಲು ಸಂಕೋಚ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ನಮ್ಮ ಭಾಷೆಯನ್ನು ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕನ್ನಡ ಸಂಘದ ಅಧ್ಯಕ್ಷ ಡಾ ಪಲ್ಲವಿಮಣಿ ಮಾತನಾಡಿ ಕರ್ನಾಟವು ಜಾಗತಿಕ ಸ್ತರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ರಾಜ್ಯ,ಜಾನಪದ,ಕಲೆ ವಾಸ್ತುಶಿಲ್ಪಗಳ ಮೂಲಕ ಜಗತ್ತಿನ ಶ್ರೇಷ್ಟ ನಾಗರೀಕತೆಗಳ ಸಾಲಿನಲ್ಲಿ ನಿಂತಿರುವ ಭವ್ಯವಾದ ನಾಡು ನಮ್ಮ ಕರುನಾಡು,ಇಂತಹ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡುವ ಬದಲು ಮುಂದಿನ ವರ್ಷ ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಇತರೇ ಭಾಷಿಗರಿಗೆ ಮಾದರಿಯಾಗಬೇಕೆಂದು ಹೇಳಿದರು.

ತಾಲ್ಲೂಕಿನಲ್ಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚಿನ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇಓ ಎಚ್‌ರವಿ ಕುಮಾರ್, ಪ್ರಭಾರ ಬಿಇಓ ಶಶಿಕಳ,ಎಂ ಗೋವಿಂದ, ಷಂಶುದ್ದೀನ್ ಬಾಬು, ಚಂದ್ರವೇಣಿ ಮಂಜುನಾಥ್, ನೌಕರರ ಸಂಘ ಅಧ್ಯಕ್ಷ ರವಿ, ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ಎಚ್ ಕೆ ನಾರಾಯಣಸ್ವಾಮಿ, ಕೆ ಚಂದ್ರಾರೆಡ್ಡಿ,ಸಮಾಜ ಸೇವಕರಾದ ಚಿಕ್ಕ ವಲಗಮಾದಿ ಮುನಿರಾಜು, ಪುರಸಭೆ ಸದಸ್ಯರಾದ ಅರುಣಾಚಲ ಮಣಿ,ಶಫಿ, ವೆಂಕಟೇಶ್, ಯುವರಾಜ್, ರಾಕೇಶ್,ಎಇಇ ರವಿ, ಎಲ್ ರಾಮಕೃಷ್ಣ,ಟಿಎಚ್ಓ ಡಾ ಸುನಿಲ್ ಕುಮಾರ್, ಸಿಡಿಪಿಓ ಮುನಿರಾಜು, ಸಂತೋಷ್, ಕರುನಾಡ ರಾಮಪ್ರಸಾದ್, ಸುಜಾತಮ್ಮ, ರಾಜಪ್ಪ,ವೈ ವಿ ರಮೇಶ್, ಬೇಕರಿ ಶ್ರೀನಿವಾಸ್,ರಂಗರಾಮ್ಯ,ಅ ನಾ ಹರೀಶ್ , ನವೀನ್ ಗೌಡ ಉಪಸ್ಥಿತರಿದ್ದರು .

ಬಂಗಾರಪೇಟೆ ನಗರದ ಪುರಸಭೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕರು ಮತ್ತು ಅಧಿಕಾರಿಗಳು ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.