ಕೆಜಿಎಫ್: ರಾಬರ್ಟ್‌ಸನ್‌ಪೇಟೆಯ ಹುಲ್ಲು ಮಾರುಕಟ್ಟೆಯಲ್ಲಿರುವ ನಗರಸಭೆಗೆ ಸೇರಿದ ಅಂಗಡಿಗಳನ್ನು ಮುಂಜಾನೆ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಹುಲ್ಲಿನ ಮಾರುಕಟ್ಟೆ ಜಾಗದಲ್ಲಿ ಕಾರು ಮತ್ತು ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಅಭಿವೃದ್ಧಿಪಡಿಸಲು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ಅಥವಾ ವಸ್ತುಗಳನ್ನು ತೆಗೆದುಕೊಳ್ಳಲು ವರ್ತಕರಿಗೆ ಅವಕಾಶ ನೀಡದೆ ಅಂಗಡಿಗಳ ಶೆಟ್ಟರ್‌ಗಳನ್ನು ಒಡೆದು ಹಾಕಿರುವುದಕ್ಕೆ ವರ್ತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಾರುಕಟ್ಟೆಯಲ್ಲಿರುವ ಸುಮಾರು ಹತ್ತಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ನಗರಸಭೆಗೆ ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದೇವೆ. ಈ ಜಾಗ ನಗರಸಭೆಗೆ ಬೇಕಿದ್ದರೆ, ನಮಗೆ ಬೇರೆ ಸ್ಥಳಾವಕಾಶ ಮಾಡಿಕೊಟ್ಟು ಖಾಲಿ ಮಾಡಿಸಬಹುದಿತ್ತು. ತಿನ್ನುವ ಅನ್ನಕ್ಕೆ ಕಲ್ಲು ಹಾಕಲಾಗಿದೆ. ಇದರ ಬದಲು ವಿಷ ಕೊಡಿ’ ಎಂದು ವರ್ತಕರು ಗೋಗೆರೆದಿದ್ದಾರೆ.
ತೆರವು ಕಾರ್ಯಾಚರಣೆಯಲ್ಲಿ ಮುಂದಾಳತ್ವ ವಹಿಸಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ವರ್ತಕರಿಗೆ ಅವಾಚ್ಯ ಭಾಷೆ ಬಳಸಿದ್ದಾರೆ. ಅಂಗಡಿ ತೆರವಿನಿಂದ ಜೀವನವೇ ಹೋಗಿದೆ. ನಮಗೆ ಹೆಚ್ಚು ಕಡಿಮೆಯಾದರೆ ಶಾಸಕಿ, ನಗರಸಭೆ ಅಧ್ಯಕ್ಷರೇ ಕಾರಣ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.