ADVERTISEMENT

ಕೆಜಿಎಫ್‌ | ಪ್ರತ್ಯೇಕ ಮೂರು ಕಳ್ಳತನ ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:23 IST
Last Updated 24 ಫೆಬ್ರುವರಿ 2026, 6:23 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕೆಜಿಎಫ್‌: ತಾಲ್ಲೂಕಿನ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳಲ್ಲಿ ಆಂಡರಸನ್‌ಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ₹1.66 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಘಟ್ಟಮಾದಮಂಗಲ ಗ್ರಾಮದ ಹೊರವಲಯದಲ್ಲಿರುವ ಉದ್ದಂಡಮ್ಮ ದೇವಾಲಯ ಮತ್ತು ಬಾಣಗಿರಿಯ ಗುರುಮೂರ್ತಿ ಯಲ್ಲಮ್ಮ ದೇವಾಲಯಗಳಲ್ಲಿ ಈಚೆಗೆ ಕಳ್ಳತನ ನಡೆದಿತ್ತು. ಈ ಸಂಬಂಧ ಪ್ರಭಾಕರ್‌ ಮತ್ತು ಶಿವರಾಮರೆಡ್ಡಿ ಎಂಬುವರು ದೂರು ನೀಡಿದ್ದರು. ದೂರಿನ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಆಂಧ್ರಪ್ರದೇಶದ ಮುರುಗೇಶ್‌, ರಾಜುವೇಲು ಮತ್ತು ಸುರೇಶ್‌ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹85 ಸಾವಿರ ಮೌಲ್ಯದ ಆಭರಣ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಂಡರಸನ್‌ಪೇಟೆಯ ಸೈಯದ್‌ ಸದಾಕತ್‌ ಎಂಬುವರ ಮನೆಯಲ್ಲಿ ಈಚೆಗೆ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೂರ್ದ್‌ ನಗರದ ನಿವಾಸಿ ಅರವಿಂದ್‌ ಎಂಬಾತನನ್ನು ಬಂಧಿಸಿ, ಆತನಿಂದ ₹25 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ₹20 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಮಸ್ಕಂ ದಾಮೋದರನ್‌ ಎಂಬುವರ ಮನೆಯಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆಯ ಇಟಿ ಬ್ಲಾಕ್‌ ನಿವಾಸಿ ರವಿಕುಮಾರ್‌ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಒಂದು ಬೈಕ್‌, ಸೈಕಲ್‌ ಮತ್ತು ಹಿತ್ತಾಳೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಎಂ.ಚಂದ್ರಶೇಖರ್‌ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ವೇಣುಗೋಪಾಲ್‌, ರಾಜೇಂದ್ರ, ಸತೀಶ್, ಗೋಪಿ, ರಮೇಶ್ ಜಂಬರಗಿ, ಲೋಕೇಶ್‌ ಮತ್ತು ಮನೋಹರ್‌ ಕಾರ್ಯಾಚರಣೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.