ADVERTISEMENT

ಕೋಲಾರ | ಕೋದಂಡರಾಮಸ್ವಾಮಿ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:56 IST
Last Updated 23 ಆಗಸ್ಟ್ 2025, 4:56 IST
<div class="paragraphs"><p>ಚಿತ್ರ ಕೃಪೆ:</p></div>

ಚಿತ್ರ ಕೃಪೆ:

   

ಕೋಲಾರ: ನಗರದ ಪಿ.ಸಿ ಬಡಾವಣೆಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ 24 ಗಂಟೆ ಕಾಲ ಅಖಂಡ ರಾಮಕೋಟಿ ಭಜನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕ ಮೃತ್ಯುಂಜಯ ಶಂಕರ್ ದೀಕ್ಷಿತ್ ತಿಳಿಸಿದ್ದಾರೆ.

ಆ.22 ರಂದು ಬೆಳಗ್ಗೆ 5 ಗಂಟೆಗೆ ಪೂಜಾ ಕಾರ್ಯಕ್ರಮಗಳೊಂದಿಗೆ ರಾಮಕೋಟಿ ಭಜನೆ ಪ್ರಾರಂಭಗೊಂಡಿದೆ. ಆ.23ರ ಶನಿವಾರ ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ, ಕೋದಂಡ ರಾಮಸ್ವಾಮಿಗೆ ಅಭಿಷೇಕ, ಅನ್ನಸಂತರ್ಪಣೆ ಕಾರ್ಯಕ್ರಮವಿದೆ. ಸಂಜೆ 7 ಗಂಟೆಗೆ ಕೋದಂಡರಾಮಸ್ವಾಮಿಯವರ ಪಲ್ಲಕ್ಕಿ ಉತ್ಸವ ನಡೆಯಲಿದೆ.

ADVERTISEMENT

ರಾಮಕೋಟಿ ಭಜನೆಯನ್ನು ಹರಿಕಥಾ ವಿದ್ವಾಂಸೆ ಯುವರಾಣಿಯಮ್ಮ ತಂಡದಿಂದ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.