ADVERTISEMENT

ಮುಳಬಾಗಿಲು | ಐಪಿಎಲ್ ಬೆಟ್ಟಿಂಗ್: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2025, 15:35 IST
Last Updated 6 ಮೇ 2025, 15:35 IST
ಮುಳಬಾಗಿಲು ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಸಿಇಎನ್ ಪೊಲೀಸರು 
ಮುಳಬಾಗಿಲು ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಸಿಇಎನ್ ಪೊಲೀಸರು    

ಮುಳಬಾಗಿಲು: ಆನ್‌ಲೈನ್‌ ಆ್ಯಪ್‌ಗಳ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಲಾರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಆನ್‌ಲೈನ್‌ ಆ್ಯಪ್‌ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಮುಳಬಾಗಿಲು ನಗರದ ನಯಾಜ್ ಎಂಬುವವನನ್ನು ಬಂಧಿಸಿ, ಆತನಿಂದ ಎರಡು ಮೊಬೈಲ್‌, ಖಾತೆಯಲ್ಲಿದ್ದ ₹5.19 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತ ಸಾರ್ವಜನಿಕರಿಂದ ನಗದು ಹಾಗೂ ಯುಪಿಐ ಮೂಲಕ ಹಣ ಪಡೆದು ಬೆಟ್ಟಿಂಗ್ ದಂದೆ ನಡೆಸುತ್ತಿದ್ದ. ಈತನೊಂದಿಗೆ ಇನ್ನೂ ಹಲವಾರು ಮಂದಿ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. , ಹೆಚ್ಚುವರಿ ಪೊಲೀಸ್ ವರಿ‌ಷ್ಠಾಧಿಕಾರಿ ಸಿ.ಆರ್. ರವಿಶಂಕರ್, ಎಚ್.ಸಿ. ಜಗದೀಶ್, ಸಿಇಎನ್ ಪೊಲೀಸ್ ಅಧಿಕಾರಿ ರಾಜೇಶ್, ಎಸ್.ಆರ್. ಜಗದೀಶ್, ವಿನಯ್, ಶಿವಾನಂದ, ಅರುಣ್ ಕುಮಾರ್ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.