
ಕೋಲಾರ: ಜಿಲ್ಲೆಯ ಜನರ ಅನೇಕ ನೋವು, ನಲಿವಿಗೆ ಕಾರಣವಾದ 2025ಕ್ಕೆ ವಿದಾಯ ಹೇಳಿ ಹೊಸ ಕನಸುಗಳ, ಹೊಸ ಭರವಸೆಯ 2026ರ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದೆ.
ಬುಧವಾರ ರಾತ್ರಿ ನಗರದೊಳಗೆ ಅಂಥ ಸಂಭ್ರಮ ಕಾಣಲಿಲ್ಲ. ಆದರೆ, ಕೆಲ ಹೋಟೆಲ್, ಡಾಬಾ, ರೆಸಾರ್ಟ್‌ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಬೇಕರಿಗಳಲ್ಲಿ ಕೇಕ್ ಮಾರಾಟದ ಭರಾಟೆ ಜೋರಾಗಿತ್ತು. ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದರಿಂದ ಆಕರ್ಷಕವಾಗಿ ಕಾಣುತ್ತಿದ್ದವು. ಮದ್ಯದಂಗಡಿಗಳಲ್ಲಿ ಸಂಜೆ ವೇಳೆಗೆ ಬಹುತೇಕ ಸರಕು ಮಾರಾಟವಾಗಿತ್ತು.
ಕೆಲವರು ಮನೆಗಳಲ್ಲಿ ಹೊಸ ವರ್ಷಾಚರಣೆ ಮಾಡಿದರೆ, ಇನ್ನು ಕೆಲವರು ಹೋಟೆಲ್, ರೆಸಾರ್ಟ್, ಹೋಂ ಸ್ಟೇ, ಕ್ಲಬ್‌ಗಳು, ಬಾರ್‌ಗಳಲ್ಲಿ ಆಚರಿಸಿದರು. ಮಧ್ಯರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು. ‘ಹ್ಯಾಪಿ ನ್ಯೂ ಇಯರ್’ ಎಂದು ಪರಸ್ಪರ ಶುಭಾಶಯ ಕೋರಿದರು.
ಜಿಲ್ಲಾ ಪೊಲೀಸರು ಮಧ್ಯರಾತ್ರಿ 12.30ರವರೆಗೆ ಮಾತ್ರ ಹೊಸ ವರ್ಷದ ಆಚರಣೆಗೆ ಅವಕಾಶ ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ 650 ಪೊಲೀಸರು ನಿಗಾ ಇಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.