ADVERTISEMENT

ಅಂತರ ರಾಜ್ಯ ಸರಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:13 IST
Last Updated 13 ಫೆಬ್ರುವರಿ 2026, 7:13 IST
<div class="paragraphs"><p>ಬಂಧನ</p></div>

ಬಂಧನ

   

ಕೋಲಾರ: ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ ರಾಜ್ಯ ಸರಗಳ್ಳರನ್ನು ಬಂಧಿಸಿ, ₹6.25 ಲಕ್ಷ ಮೌಲ್ಯದ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತಿರಪತ್ತೂರು ಜಿಲ್ಲೆಯ ವಾಣಿಯಂಬಾಡಿ ಮೂಲದ ಮಹಮದ್ ಯಾಸೀನ್ (25) ಹಾಗೂ ಜೀಲನ್ (24) ಬಂಧಿತ ಆರೋಪಿಗಗಳು.

ADVERTISEMENT

ಕೋಲಾರದ ಉಮಾ ಎಂಬುವರು ಜ. 21 ರಂದು ಕುರುಬರಪೇಟೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚೋರರು ದ್ವಿಚಕ್ರ ವಾಹನದಲ್ಲಿ ಬಂದು ಸರ ಕಸಿದುಕೊಂಡು ಹೋಗಿದ್ದರು. ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸದಾನಂದ, ಪಿಎಸ್‍ಐಗಳಾದ ಹೊನ್ನೇಗೌಡ, ಸೈಯದ್ ಖಾಸಿಂ, ಸಂಗಮೇಶ ಮೇಟಿ ಹಾಗೂ ಸಿಬ್ಬಂದಿಯಾದ ಮೋಹನ್, ಆರ್.ನಾರಾಯಣಸ್ವಾಮಿ, ಶಂಕರಪ್ಪ, ಆಂಜಿನಪ್ಪ, ಮಹಬೂಬ್ ಪಾಷ, ಎಂ.ಶ್ರೀನಾಥ್, ಗಂಗಾಧರ್, ಶಾಮೂರ್ತಿ, ನವೀನ್, ವಿನಯ್, ಜೀಪ್ ಚಾಲಕ ಮುರಳಿ ಮತ್ತು ಟೆಕ್ನಿಕಲ್ ಸಿಬ್ಬಂದಿ ಮುರಳಿ ಮತ್ತು ಶ್ರೀನಾಥ್ ತಂಡವು ಸುಮಾರು 200ಕ್ಕೂ ಹೆಚ್ಚು ಸಿ.ಸಿ ಕ್ಯಾಮರೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಆರೋಪಿಗಳನ್ನು ಪತ್ತೆ ಮಾಡಿದ್ದರು.

ಆರೋಪಿಗಳ ವಿರುದ್ಧ ಕೋಲಾರ ನಗರ, ವಿಕೋಟೆ ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.