ADVERTISEMENT

ಠಾಣೆಯಲ್ಲಿ ಎಣ್ಣೆ ಪಾರ್ಟಿ ವಿಡಿಯೊ: ಮೂವರು ಪೊಲೀಸರು ಅಮಾನತು

ವರ್ಷದ ಹಿಂದಿನ ವಿಡಿಯೊ ಈಗ ವೈರಲ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:12 IST
Last Updated 20 ಸೆಪ್ಟೆಂಬರ್ 2022, 3:12 IST
ಗೌನಿಪಲ್ಲಿ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿಯಿಂದ ಪಾರ್ಟಿ
ಗೌನಿಪಲ್ಲಿ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿಯಿಂದ ಪಾರ್ಟಿ   

ಶ್ರೀನಿವಾಸಪುರ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದೂವರೆ ವರ್ಷ ಹಿಂದಿನ ಠಾಣೆಯಲ್ಲಿಯ ಮದ್ಯದ ಪಾರ್ಟಿ ವಿಡಿಯೊ ಈಗ ಮೂವರು ಪೊಲೀಸರ ತಲೆದಂಡಕ್ಕೆ ಕಾರಣವಾಗಿದೆ.

ಕಾನ್‌ಸ್ಟೆಬಲ್‌ಗಳಾದ ಚಲಪತಿ, ರಮೇಶ್‌ ಬಾಬು, ಮಂಜುನಾಥ್‌ ತಾಲ್ಲೂಕಿನ ಗೌನಿಪಲ್ಲಿ ಠಾಣೆಯಲ್ಲೇ ಮದ್ಯ ಸೇವಿಸುತ್ತಿರುವುದು ವಿಡಿಯೊದಲ್ಲಿದೆ. ಈ ಮೂವರನ್ನೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಸೋಮವಾರ ಅಮಾನತುಗೊಳಿಸಿದ್ದಾರೆ.

ಠಾಣೆಯಲ್ಲಿ ಮಾಂಸದೂಟದ ಜೊತೆ ಮದ್ಯ ಸೇವಿಸುತ್ತಾ ಈ ಮೂವರು ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ವ್ಯಕ್ತಿಯೊಬ್ಬರೊಂದಿಗೆ ಮೊಬೈಲ್‌ನಲ್ಲಿ ತೆಲುಗಿನಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ADVERTISEMENT

‘ಈ ವಿಡಿಯೊ ಬಹಳ ಹಳೆಯದ್ದು. ಸುಮಾರು ಒಂದೂವರೆ ವರ್ಷದ ಹಿಂದೆ ನಡೆದ ಘಟನೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆಗಸಬ್‌ ಇನ್‌ಸ್ಪೆಕ್ಟರ್‌ ಹುದ್ದೆ ಖಾಲಿ ಇತ್ತು. ಮೂವರನ್ನು ಅಮಾನತು ಮಾಡಿದ್ದು, ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.