ADVERTISEMENT

ಕೋಲಾರ | ಶಾಲಾ‌ ಬಸ್ ಪಲ್ಟಿ: ಐವರು ಮಕ್ಕಳಿಗೆ ಸಣ್ಣಪುಟ್ಟ ಗಾಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 5:19 IST
Last Updated 3 ಆಗಸ್ಟ್ 2024, 5:19 IST
<div class="paragraphs"><p>ಪಲ್ಟಿಯಾಗಿರುವ ಶಾಲಾ ಬಸ್&nbsp;</p></div>

ಪಲ್ಟಿಯಾಗಿರುವ ಶಾಲಾ ಬಸ್ 

   

ಕೋಲಾರ: ನಗರ ಹೊರವಲಯದ ಕೂಟೇರಿ ಬಳಿ ಶನಿವಾರ ಬೆಳಿಗ್ಗೆ ಬಸ್ ಪಲ್ಟಿಯಾಗಿ ಐವರು ಮಕ್ಕಳಿಗೆ ಸಣ್ಣಪುಟ್ಟ ಗಾಯ ಹಾಗೂ ಚಾಲಕನ ಕಾಲಿಗೆ‌ ಗಂಭೀರ ಗಾಯವಾಗಿದೆ.

ಬೆಗ್ಲಿ ಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯ ಬಸ್ ಇದಾಗಿದೆ.

ADVERTISEMENT

ಬಸ್ಸಿನಲ್ಲಿ ಸುಮಾರು 35 ಮಕ್ಕಳು ಇದ್ದರು ಎಂಬುದು ಗೊತ್ತಾಗಿದೆ‌. ಮಕ್ಕಳು ಹಾಗೂ ಗಾಯಾಳು ಚಾಲಕನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.