ಮುಳಬಾಗಿಲು: ತಾಲ್ಲೂಕಿನ ಕದರಿಪುರ ಹೊರವಲಯದ ನಗರಸಭೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭಾನುವಾರ ಜಿಲ್ಲಾಧಿಕಾರಿ ಅಕ್ರಂಪಾಷ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಕಸವನ್ನು ಕದರಿಪುರ ಬಳಿಯ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಹಾಕಿ ಒಣ, ಹಸಿ ಕಸ ಹಾಗೂ ಮಣ್ಣನ್ನು ವಿಂಗಡಿಸಿ ಸಾವಯವ ಗೊಬ್ಬರ ತಯಾರಿಕೆ ಮಾಡುವ ವಿಧಾನಗಳನ್ನು ವೀಕ್ಷಿಸಿದರು.
ನಂತರ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್, ಕೈ ಹಾಗೂ ಕಾಲುಗಳಿಗೆ ರಕ್ಷಾ ಕವಚ ಹಾಕಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತ ವಿ.ಶ್ರೀಧರ್, ಶ್ರೀನಿವಾಸ್, ಕಿರಿಯ ಆರೋಗ್ಯ ನಿರೀಕ್ಷಕ ಅಂಬರೀಶ್, ನೋಡಲ್ ಅಧಿಕಾರಿ ಸುನೀಲ್ ಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.