ಬೇತಮಂಗಲ: ಕ್ಯಾಸಂಬಳ್ಳಿ ಗ್ರಾಮದ ಕಾಶಿ ವಿಶ್ವನಾಥಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಕರಗ ಮಹೋತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಪುಪ್ಪ ಪಲ್ಲಕ್ಕಿ ಉತ್ಸವ ಸೇರಿದಂತೆ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವಗಳ ಮೆರವಣಿಗೆ ಮಾಡಲಾಯಿತು. ಕರಗ ಪೂಜಾರಿ ಕೋಲಾರ ನವೀನ್ ಕರಗವನ್ನು ಹೊತ್ತು ಗೋವಿಂದ ನಾಮ ಸ್ಮರಣೆಯಲ್ಲಿ ದೇವಾಲಯದಿಂದ ಹೊರ ಬಂದು ತಮಟೆ ಶಬ್ದಕ್ಕೆ ನೃತ್ಯ ಪ್ರದರ್ಶಿಸಿ ಭಕ್ತಾಧಿಗಳ ಗಮನ ಸೆಳೆದರು.
ಕ್ಯಾಸಂಬಳ್ಳಿ ಯುವ ಮುಖಂಡ ವಿಕ್ಕಿ ರೆಡ್ಡಿ ನೇತೃತ್ವದಲ್ಲಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ತೆಲುಗು ಭಾಷೆಯ ಹಾಸ್ಯ ಕಲಾವಿದರಿಂದ ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಲಾಯಿತು.
ಟಿಕೆಆರ್ ಫೌಂಡೇಶನ್ ಕಿರಣ್ ಕುಮಾರ್ ರೆಡ್ಡಿ, ಮಾಜಿ ಶಾಸಕ ಎಂ.ನಾರಾಯಣ ಸ್ವಾಮಿ, ದಶರಥ್ ರೆಡ್ಡಿ, ಪ್ರತಾಪ್, ಶಿವಾರೆಡ್ಡಿ, ಸುಬ್ರಮಣಿ, ಮಹೇಶ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.