
ಮಾಗಡಿ: ತಾಲ್ಲೂಕಿನ ಚಕ್ರಬಾವಿ ಮುಖ್ಯರಸ್ತೆ ಬಳಿ ಮಂಗಳವಾರ ರಾತ್ರಿ ಕಾರಿಗೆ ನಾಲ್ಕು ಚಿರತೆಗಳು ಅಡ್ಡ ಬಂದಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮೂರು ಚಿರತೆ ಮರಿ ಹಾಗೂ ಒಂದು ಚಿರತೆ ಏಕಾಏಕಿ ರಸ್ತೆಯಲ್ಲಿ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹಲವು ದಿನಗಳಿಂದ ಮರಳು ದೇವನಪುರದಲ್ಲಿ ಚಿರತೆ ಹಾವಳಿಯಿಂದ ಸಾಕು ಪ್ರಾಣಿಗಳ ಮೇಲೆ ದಾಳಿಯಾಗಿ ಅಪಾರ ನಷ್ಟ ಉಂಟಾಗಿದೆ. ಆದರೆ, ಅರಣ್ಯ ಇಲಾಖೆ ಇಲ್ಲಿಯವರೆಗೆ ಚಿರತೆ ಸೆರೆ ಹಿಡಿದಿಲ್ಲ. ಹಾಗಾಗಿ ಇಲಾಖೆ ಕೂಡಲೇ ಬೋನನ್ನು ಇಟ್ಟು ಚಿರತೆ ಹಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕು ವಲಯ ಅರಣ್ಯಾಧಿಕಾರಿ ಚೈತ್ರ ಮಾತನಾಡಿ, ಚಿರತೆ ಹಾವಳಿ ಬಗ್ಗೆ ದೂರು ಬಂದಿದ್ದು, ಶೀಘ್ರ ಬೋನ್ ಇರಿಸಿ ಚಿರತೆ ಸೆರೆ ಹಿಡಿಯಲಾಗುವುದು. ರಾತ್ರಿ ವೇಳೆ ಗ್ರಾಮಸ್ಥರು ಹೊರಗಡೆ ಓಡಾಡುವಾಗ ಎಚ್ಚರವಹಿಸಿ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.