ADVERTISEMENT

‘ಜಿಲ್ಲೆಯ ಕೀರ್ತಿ ರಾಷ್ಟ್ರಮಟ್ಟದಲ್ಲಿ ಪಸರಿಸಲಿ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:54 IST
Last Updated 27 ಸೆಪ್ಟೆಂಬರ್ 2021, 5:54 IST
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಾದ ನಾರಾಯಣಸ್ವಾಮಿ ಹಾಗೂ ಸೋಮಶೇಖರ್ ಅವರನ್ನು ಕೋಲಾರದಲ್ಲಿ ಶನಿವಾರ ಸನ್ಮಾನಿಸಲಾಯಿತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಚೌಡಪ್ಪ ಹಾಜರಿದ್ದರು
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಾದ ನಾರಾಯಣಸ್ವಾಮಿ ಹಾಗೂ ಸೋಮಶೇಖರ್ ಅವರನ್ನು ಕೋಲಾರದಲ್ಲಿ ಶನಿವಾರ ಸನ್ಮಾನಿಸಲಾಯಿತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್. ಶ್ರೀನಿವಾಸರೆಡ್ಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್. ಚೌಡಪ್ಪ ಹಾಜರಿದ್ದರು   

ಕೋಲಾರ: ‘ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಳುಗಳು ಸಂಯಮ, ಶ್ರದ್ಧೆ, ನಿರಂತರ ಅಭ್ಯಾಸದಿಂದ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎನ್. ಶ್ರೀನಿವಾಸ ರೆಡ್ಡಿ ಆಶಿಸಿದರು.

ಜಿಲ್ಲೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸೆ. 27ರಿಂದ ಹರಿಯಾಣದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಾದ ನಾರಾಯಣಸ್ವಾಮಿ ಹಾಗೂ ಸೋಮಶೇಖರ್ ಅವರನ್ನು ಶನಿವಾರ ಸನ್ಮಾನಿಸಿ ಅವರು ಮಾತನಾಡಿದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂಕು ತಾಯಲೂರಿನ ಆರೋಗ್ಯ ಇಲಾಖೆಯ ಚಾಲಕ ನಾರಾಯಣಸ್ವಾಮಿ ಜಾವೆಲಿನ್ ಎಸೆತ ಹಾಗೂ ಕೆ.ಬಿ. ಕೊತ್ತೂರಿನ ಪ್ರಾಥಮಿಕ ಶಾಲಾ ಶಿಕ್ಷಕ ಸೋಮಶೇಖರ್ ಗುಂಡು ಎಸೆತ ಸ್ವರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ. ಇದು ಜಿಲ್ಲೆಗೆ ಸಂದ ಗೌರವ ಎಂದರು.

ADVERTISEMENT

ಕ್ರೀಡಾಕೂಟದಲ್ಲಿ ಶಿಸ್ತು, ಶ್ರದ್ಧೆಯಿಂದ ಪಾಲ್ಗೊಳ್ಳಬೇಕು. ಜಿಲ್ಲೆಯ ಘನತೆಗೆ ಕುತ್ತು ಬಾರದಂತೆ ಸಂಯಮದಿಂದ ನಡೆದುಕೊಳ್ಳಬೇಕು. ಗೆಲುವು ನಿಮ್ಮ ಗುರಿಯಾಗಿರಲಿ. ಆದರೆ, ಅದಕ್ಕಾಗಿ ಪ್ರಾಮಾಣಿಕ ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ರಾಷ್ಟ್ರಮಟ್ಟದ ಅಖಿಲ ಭಾರತ ನಾಗರಿಕ ಸೇವಾ ಕ್ರೀಡಾಕೂಟ ಒಂದು ಕ್ರೀಡೆಯನ್ನಾದರೂ ಕರ್ನಾಟಕದಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಚೌಡಪ್ಪ, ಖಜಾಂಚಿ ವಿಜಯ್, ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ನಾರಾಯಣಸ್ವಾಮಿ, ಕ್ರೀಡಾಪಟುಗಳಾದ ನಾರಾಯಣಸ್ವಾಮಿ, ಸೋಮಶೇಖರ್,  ಮಂಜುನಾಥ್, ಅನಿಲ್, ಎಂ.ಎನ್. ಶ್ರೀನಿವಾಸಮೂರ್ತಿ, ಚಂದ್ರಕಲಾ, ಚಂದ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.