ADVERTISEMENT

ಕೋಲಾರ: ಕೀ ಬಂಚ್‌ ಚಾಕುವಿನಿಂದ ಮಹಿಳೆಯನ್ನು ಇರಿದು ಕೊಂದ ಪ್ರಿಯತಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 10:02 IST
Last Updated 15 ಜನವರಿ 2026, 10:02 IST
<div class="paragraphs"><p>ಸುಜಾತಾ,&nbsp;ಚಿರಂಜೀವಿ</p></div>

ಸುಜಾತಾ, ಚಿರಂಜೀವಿ

   

ಕೋಲಾರ: ನಗರ ಹೊರವಲಯದ ಬಂಗಾರಪೇಟೆ ಜಿಗ್ ಜಾಗ್‌ ರಸ್ತೆ ಸಮೀಪ ವಿವಾಹಿತ ವ್ಯಕ್ತಿಯೊಬ್ಬ ಮದುವೆಗೆ ನಿರಾಕರಿಸಿದ ವಿವಾಹಿತೆಯನ್ನು ಗುರುವಾರ ಕೀ ಬಂಚ್‌ ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಬಂಗಾರಪೇಟೆ ತಾಲ್ಲೂಕಿನ ದಾಸರ ಹೊಸಹಳ್ಳಿ ಗ್ರಾಮದ ಸುಜಾತಾ (28) ಕೊಲೆಯಾದ ಮಹಿಳೆ. ಹೊಸಕೋಟೆಯ ಖಾಸಗಿ ಬ್ಯಾಂಕ್‌ನ ಉದ್ಯೋಗಿ, ಯಲಬುರ್ಗಿ ಗ್ರಾಮದ ಚಿರಂಜೀವಿ (27) ಕೊಲೆ ಆರೋಪಿ. ಕೃತ್ಯ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದು ಸ್ಥಳೀಯರು ಆರೋಪಿಯನ್ನು ಹಿಡಿದು ಅರೆಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೋಲಾರ ನಗರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ADVERTISEMENT

‌ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಹಣ ವಸೂಲಿಗೆ ಹೋಗುತ್ತಿದ್ದಾಗ ಮಹಿಳೆಯ ಪರಿಚಯವಾಗಿದೆ ಪ್ರೀತಿಗೆ ತಿರುಗಿದೆ. ಇಬ್ಬರಿಗೂ ಮದುವೆಯಾಗಿದ್ದು, ಆತನಿಗೆ ಒಂದು ಮಗು, ನರಸಾಪುರದ ಕಂಪನಿಯೊಂದರಲ್ಲಿ ನರ್ಸ್‌ ಆಗಿರುವ ಮಹಿಳೆಗೆ ಒಂದು ಮಗು ಇದೆ.

‌ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ತೆರಳಲು ಜಿಗ್‌ಜಾಗ್‌ ಬಳಿ ಕಂಪನಿ ವಾಹನಕ್ಕೆ ಕಾಯುತ್ತಿದ್ದ ಮಹಿಳೆಯನ್ನು ಆರೋಪಿ ತನ್ನ ಕೀ ಬಂಚ್‌ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಭೇಟಿ ನೀಡಿ ಪರಿಶೀಲಿಸಿದರು. ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಜಗಳ ಮಾಡಿಕೊಂಡಿದ್ದಾರೆ. ಸುಜಾತಾ ಅವರಿಗೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಿಸುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.