
ಮಾಲೂರು: ಕಡಿಮೆ ಬಜೆಟ್‌ನಲ್ಲಿ ಹೊಟ್ಟೆ ತುಂಬಾ ಊಟಕ್ಕೆ ಹೆಸರಾಗಿದೆ ಪಟ್ಟಣದ ಮಹಾರಾಜ ಸರ್ಕಲ್ ಬಳಿಯ ಅನ್ನಪೂರ್ಣೇಶ್ವರಿ ಮೆಸ್.
30 ವರ್ಷಗಳಿಂದ ನಡೆಯುತ್ತಿರುವ ಹೋಟೆಲ್ ಪ್ರತಿನಿತ್ಯ ಊಟದ ಜತೆಗೆ ಪ್ರತಿನಿತ್ಯ ಸಿಹಿ ಇರುತ್ತದೆ. ಸೋಮವಾರ ಒಬ್ಬಟ್ಟು, ಉಳಿದ ದಿನಗಳಲ್ಲಿ ಪಾಯಸ, ಪೊಂಗಲ್, ಕೇಸರಿ ಬಾತ್ ಸೇರಿದಂತೆ ಸಿಹಿ ತಿಂಡಿಗಳಿರುತ್ತವೆ. ಇನ್ನು ಇಲ್ಲಿ ಮುದ್ದೆ ಊಟಕ್ಕೆ ಬಹಳ ಬೇಡಿಕೆ ಇದೆ. ಮಧ್ಯಾಹ್ನದ ಉಟಕ್ಕೆ ಮುದ್ದೆ, ಚಪಾತಿ, ಸಾಗು, ಪಲ್ಯ, ಕಾಳು ಸಾರು, ಅಪ್ಪಳ, ರಸಂ ಮಾಮೂಲಿಯಾಗಿರುತ್ತದೆ.
ಒಂದು ಊಟ ₹60 ಆಗಿದ್ದು, ಬಡವರು, ಮಧ್ಯಮ ವರ್ಗದವರು ಎಲ್ಲರೂ ಭೇಟಿ ನೀಡುತ್ತಾರೆ. ಬೆಳಿಗ್ಗೆ ತಿಂಡಿಗೆ ಚಿತ್ರಾನ್ನ, ಪೊಂಗಲ್, ವಾಂಗಿಬಾತ್ ಹಾಗೂ ಕಲರ್ ರೈಸ್ ಇರುತ್ತದೆ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಈ ಮೆಸ್‌ನಿಂದಲೇ ಊಟ ಹಾಗೂ ತಿಂಡಿ ಸರಬರಾಜಾಗುತ್ತದೆ.
ಮೆಸ್ ಮಾಲೀಕ ಶಿವಕುಮಾರ್ ಶಿವಣ್ಣ ಎಂದೇ ಹೆಸರಾಗಿದ್ದಾರೆ. ಈ ಮೆಸ್‌ನಲ್ಲಿ ಊಟ ಮನೆ ಅಡುಗೆಯಂತೆಯೇ ಇದ್ದು, ಹಳೆ ಪದ್ಧತಿ ರೀತಿಯಲ್ಲಿ ಒರಳು ಕಲ್ಲಿನಿಂದ ಮಲಾಸೆ ರುಬ್ಬಿ ಸಾಂಬಾರ್ ತಯಾರಿಸುತ್ತಾರೆ. ಇದರಿಂದ ಸಾಂಬಾರ್ ಹೆಚ್ಚು ರುಚಿಯಾಗಿರುತ್ತಾರೆ. ಹಾಗಾಗಿ ಹೆಚ್ಚು ಮಂದಿ ಈ ಮೆಸ್ ಊಟ ತಿಂಡಿಗೆ ಮುಗಿಬೀಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.