ADVERTISEMENT

ಮಾಲೂರು ಕ್ಷೇತ್ರ | ರಾಜಕೀಯ ವಲಯದಲ್ಲಿ ಭಾರಿ ಕುತೂಹಲ: 11ಕ್ಕೆ ಮರು ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:12 IST
Last Updated 5 ನವೆಂಬರ್ 2025, 5:12 IST
<div class="paragraphs"><p>ಮತ ಎಣಿಕೆ</p></div>

ಮತ ಎಣಿಕೆ

   

– ಪ್ರಜಾವಾಣಿ ಚಿತ್ರ

ಕೋಲಾರ: ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ನ.11ರಂದು ನಡೆಯಲಿದೆ.

ADVERTISEMENT

ಈ ಸಂಬಂಧ ರಾಜ್ಯ ಮುಖ್ಯ ಚುನಾಣಾಧಿಕಾರಿ ಕಚೇರಿಯಿಂದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಪತ್ರ ರವಾನೆಯಾಗಿದೆ. ದಿನಾಂಕ ನಿಗದಿ ಆಗಿರುವುದನ್ನು ಜಿಲ್ಲಾಡಳಿತದ ಮೂಲಗಳು ಖಚಿತಪಡಿಸಿವೆ.

ಮತ ಮರುಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಕೋಲಾರ ನಗರ ಹೊರವಲಯದ ತೋಟಗಾರಿಕೆ ಮಹಾವಿದ್ಯಾಲಯದ ಜಾಗ ಸೂಕ್ತವೇ ಎಂದು ಪರಿಶೀಲಿಸಿದೆ. ಅದರ ಹೊರತಾಗಿ ಬೇರೆ ಸೂಕ್ತ ಜಾಗದ ಹುಡುಕಾಟದಲ್ಲಿಯೂ ತೊಡಗಿದೆ. 

ಸುಪ್ರೀಂ ಕೋರ್ಟ್‌ ಅ.14ರ ಆದೇಶದಲ್ಲಿ ನೀಡಿರುವ ನಿರ್ದೇಶನ ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.