ADVERTISEMENT

ಮಾಲೂರಿನಲ್ಲಿ ಬ್ಯಾನರ್‌ ಹಾವಳಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:07 IST
Last Updated 17 ಫೆಬ್ರುವರಿ 2026, 6:07 IST
ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ಅಳವಡಿಸಿರುವ ಫ್ಲೈಕ್ಸ್
ಮಾಲೂರಿನ ತಾಲ್ಲೂಕು ಕಚೇರಿ ಮುಂಭಾಗ ಅಳವಡಿಸಿರುವ ಫ್ಲೈಕ್ಸ್   

ಮಾಲೂರು: ನಗರದಲ್ಲಿ ಮಹಾ ಶಿವಾರಾತ್ರಿ ಹಬ್ಬದ ಅಂಗವಾಗಿ ಮುಖ್ಯರಸ್ತೆ ಸೇರಿದಂತೆ ಸರ್ಕಾರಿ ಕಚೇರಿ ಮುಂಭಾಗ ಎಲ್ಲೆಡೆ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ.

ಇತ್ತೀಚೆಗೆ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಕಚೇರಿ ಮುಂಭಾಗ, ಮುಖ್ಯರಸ್ತೆಯ ವಿದ್ಯುತ್‌ ಕಂಬಗಳಿಗೆ ಯಾವುದೇ ರೀತಿಯ ಫ್ಲೈಕ್ಸ್, ಬ್ಯಾನರ್‌ಗಳನ್ನು ಅಳವಡಿಸಬಾರದು ಎಂದು ಪೊಲೀಸ್ ಅಧಿಕಾರಿಗಳು, ನಗರಸಭಾ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಜೊತೆಗೆ ನಗರಸಭೆಯಲ್ಲಿ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ, ಶಿವರಾತ್ರಿ ಅಂಗವಾಗಿ ಎಲ್ಲೆಡೆ ಫ್ಲೈಕ್ಸ್‌ಗಳ ಭರಾಟೆ ಹೆಚ್ಚಾಗಿದೆ.‌

ತಾಲ್ಲೂಕು ಕಚೇರಿ ಮುಂಭಾಗ, ಶಿಕ್ಷಣ ಇಲಾಖೆ ಕಚೇರಿ ಮುಂಭಾಗ ಆಡಳಿತ ಪಕ್ಷ ಸೇರಿದಂತೆ ಖಾಸಗಿ ವ್ಯಕ್ತಿಗಳ ಭಾವಚಿತ್ರವಿರುವ ಫ್ಲೈಕ್ಸ್, ಬ್ಯಾನರ್‌ಗಳಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ADVERTISEMENT
ಮಾಲೂರಿನ ಶಿಕ್ಷಣ ಇಲಾಖೆ ಮುಂಭಾಗದಲ್ಲಿ ಅಳವಡಿಸಿರುವ ಫ್ಲೈಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.