ADVERTISEMENT

ಗಾಂಜಾ ಗಿಡ ವಶ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:10 IST
Last Updated 3 ಸೆಪ್ಟೆಂಬರ್ 2021, 3:10 IST
ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಗೋಮಾಳದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಗ್ರಾಮದ ದೇವರಾಜ್ ಅವರನ್ನು ಬಂಧಿಸಿದ ಅಬಕಾರಿ ಪೊಲೀಸರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು
ಬಂಗಾರಪೇಟೆ ತಾಲ್ಲೂಕಿನ ಭೀಮಗಾನಹಳ್ಳಿ ಗೋಮಾಳದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಗ್ರಾಮದ ದೇವರಾಜ್ ಅವರನ್ನು ಬಂಧಿಸಿದ ಅಬಕಾರಿ ಪೊಲೀಸರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದರು   

ಬಂಗಾರಪೇಟೆ: ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಗಾನಹಳ್ಳಿಯ ಸರ್ವೆ ನಂ. 214ರ ಸರ್ಕಾರಿ ಗೋಮಾಳದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆಹಚ್ಚಿದ ಅಬಕಾರಿ ಪೊಲೀಸರು ಆರೋಪಿ ದೇವರಾಜ್ ಎಂಬಾತನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇನ್‌ಸ್ಪೆಕ್ಟರ್ ಪಿ.ಕೆ. ಶಶಿಕಲಾ ಸುಮಾರು
₹ 65 ಸಾವಿರ ಮೌಲ್ಯದ 2.5 ಕೆ.ಜಿ ಗಾಂಜಾ ಗಿಡಗಳನ್ನು ವಶಕ್ಕೆ
ಪಡೆದಿದ್ದಾರೆ.

ಆರೋಪಿಯು ಗೋಮಾಳ ಜಮೀನಿನ ಕಲ್ಲುಬಂಡೆಗಳ ಮಧ್ಯೆ ಪಾತಿ ಮಾಡಿ 8 ಗಾಂಜಾ ಗಿಡಗಳನ್ನು
ಬೆಳೆದಿದ್ದ. ದಾಳಿ ನಡೆಸಿದ ತಂಡದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಪ್ರಕೃತಿ ಜೈ, ಎಂ.ಆರ್. ಶಿವಶಂಕರ್, ಸಿಬ್ಬಂದಿ ಲಕ್ಷ್ಮಣ್, ಮಂಜುನಾಥ್, ಹನುಮಂತು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.