ಕೋಲಾರ: ಪುತ್ರನನ್ನು ನೋಡಲು ಪೀಟರ್ಸ್‌ಬರ್ಗ್‌ಗೆ ತೆರಳಿದ್ದ ಕೋಲಾರದ ವಯೋವೃದ್ಧರೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಶವವನ್ನು ಸ್ವದೇಶಕ್ಕೆ ತರಲು ಕುಟುಂಬದವರಿಗೆ ಸಂಸದ ಎಸ್.ಮುನಿಸ್ವಾಮಿ ನೆರವಾಗಿದ್ದಾರೆ.
ಈ ಸಂಬಂಧ ಅವರು ವಿದೇಶಾಂಗ ಇಲಾಖೆ ಹಾಗೂ ರಾಯಬಾರಿ ಕಚೇರಿಯೊಂದಿಗೆ ಮಾತನಾಡಿದ್ದಾರೆ.
ವೆಂಕಟೇಶಯ್ಯ (91) ಮೃತರು. ಅವರು ಆಗಸ್ಟ್ 23 ರಂದು ಪೀಟರ್ಸ್‌ಬರ್ಗ್‌ಗೆ ತೆರಳಿದ್ದರು. ಸೋಮವಾರ ಬೆಂಗಳೂರಿಗೆ ಅವರ ಮೃತದೇಹ ತರಲಾಗುತ್ತಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.