ADVERTISEMENT

ಕೋಲಾರ| ಮಾಸ್ಟರ್ಸ್ ಅಥ್ಲೆಟಿಕ್ಸ್‌: ಮೈಸೂರಿನ ಯೋಗೇಂದ್ರಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 7:19 IST
Last Updated 22 ಡಿಸೆಂಬರ್ 2025, 7:19 IST
ಯೋಗೇಂದ್ರ
ಯೋಗೇಂದ್ರ   

ಕೋಲಾರ: ಮೈಸೂರಿನ ಅಥ್ಲೀಟ್ ಮಾದಪ್ಪ ಯೋಗೇಂದ್ರ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 60 ವರ್ಷ ಮೇಲಿನವರ ವಿಭಾಗದಲ್ಲಿ ಈ ಶ್ರೇಯಕ್ಕೆ ಭಾಜನರಾದರು. ಅವರು ಮೊದಲ ದಿನ ಐದು ಸಾವಿರ ಮೀಟರ್ ಓಟ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

55 ವರ್ಷ ಮೇಲಿನವರ 800 ಮೀಟರ್‌ ಓಟದಲ್ಲಿ ಕೊಡಗಿನ ಎಚ್.ಎ.ಚಿನ್ನಪ್ಪ ಚಿನ್ನ ಗೆದ್ದರು. 50 ವರ್ಷ ಮೇಲಿನವ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ ಮೂಲ್ಯ ಮೊದಲ ಸ್ಥಾನ ಪಡೆದರು. 60 ವರ್ಷ ಮೇಲಿನವರ ವಿಭಾಗದಲ್ಲಿ ಬೆಂಗಳೂರಿನ ರವೀಂದ್ರ ಅಗ್ರಸ್ಥಾನ ಗಳಿಸಿದರು. ಮಹಿಳೆಯರ 5 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಉಡುಪಿಯ ನಿರ್ಮಲಾ ನಾಯಕ್‌ ಚಿನ್ನದ ಪದಕ ಜಯಿಸಿದರು.

ADVERTISEMENT

ಎರಡು ದಿನ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಗಳ ಸುಮಾರು 600 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.