ಅರವಿಂದ ಲಿಂಬಾವಳಿ
ಕೋಲಾರ: ‘ಬಿಜೆಪಿಯಲ್ಲಿ ಸಮಸ್ಯೆಗಳು ಇರುವುದು ನಿಜ’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಒಪ್ಪಿಕೊಂಡಿದ್ದಾರೆ.
ಒಂದು ಕುಟುಂಬವೆಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ಬಿಜೆಪಿ ರಾಷ್ಟ್ರೀಯ ಪಕ್ಷ. ರಾಜ್ಯದಲ್ಲಿ ಎರಡು ಬಾರಿ ಆಡಳಿತ ನಡೆಸಿದೆ. ಇಂಥ ದೊಡ್ಡ ಪಕ್ಷದಲ್ಲಿ ಸಹಜವಾಗಿ ಸಮಸ್ಯೆ ಇದ್ದೇ ಇರುತ್ತೇವೆ. ಆ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶ ದಿಂದಲೇ ಸಭೆಗಳು ನಡೆಯುತ್ತಿವೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಹೈಕಮಾಂಡ್ ಎಂಬುದು ಇದೆ. ಜೊತೆಗೆ ಸಲಹೆ, ಸೂಚನೆ ಕೊಡಲು ಆರ್‌ಎಸ್ಎಸ್‌ನ ಹಲವು ಹಿರಿಯರು ಇದ್ದಾರೆ. ಅವರ ಮಟ್ಟದಲ್ಲಿ ಚರ್ಚೆ ನಡೆಯಲಿದೆ’ ಎಂದರು.
‘ಸಭೆಯಲ್ಲಿ ಈಗಾಗಲೇ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಆದರೆ, ಆಂತರಿಕ ವಿಚಾರಗಳನ್ನು ಮಾಧ್ಯಮದ ಮುಂದೆ ಚರ್ಚಿಸುವುದಿಲ್ಲ’ ಎಂದು ಹೇಳಿದರು.
‘ಅರವಿಂದ ಲಿಂಬಾವಳಿ ಹಾಗೂ ವಿಜಯೇಂದ್ರ ನಡುವೆ ಸಂಧಾನ ಸಭೆ ನಡೆದಿದೆ ಎಂಬುವುದು ಮಾಧ್ಯಮದ ಸೃಷ್ಟಿ’ ಎಂದರು.
‘ಅಭಿಪ್ರಾಯ, ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ’
ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಅಭಿಪ್ರಾಯ, ಭಿನ್ನಾಭಿಪ್ರಾಯಗಳಿಗೆ ಮಾನ್ಯತೆ ಇಲ್ಲ. ಅಂತಿಮವಾಗಿ ಹೈಕಮಾಂಡ್ ಏನು ಆಯ್ಕೆ ಮಾಡುತ್ತದೆಯೊ ಅದನ್ನು ಪಾಲಿಸುವುದು ಸಂಪ್ರದಾಯ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಬೇರೆ ರಾಜ್ಯಗಳಲ್ಲಿಯೂ ಪಕ್ಷದ ಅಧ್ಯಕ್ಷರ ನೇಮಕ ಆಗುತ್ತಿದೆ. ಹೈಕಮಾಂಡ್ ನಿರ್ಧಾರವನ್ನು ಎಲ್ಲರೂ ಪಾಲಿಸುವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.