ADVERTISEMENT

ಮಾನಸಿಕ ಆರೋಗ್ಯ ಆತ್ಮವಿದ್ದಂತೆ: ಯೋಗ ಕ್ಷೇಮ ಅಧಿಕಾರಿ ಲಿಂಗೇಶ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 13:48 IST
Last Updated 15 ಸೆಪ್ಟೆಂಬರ್ 2021, 13:48 IST
ಧನಾತ್ಮಕ ಮಾನಸಿಕ ಆರೋಗ್ಯ ಕುರಿತು ಕೋಲಾರದಲ್ಲಿ ಪೊಲೀಸ್‌ ಸಿಬ್ಬಂದಿಗೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಯೋಗ ಕ್ಷೇಮ ಅಧಿಕಾರಿ ಲಿಂಗೇಶ್‌ ಮಾತನಾಡಿದರು
ಧನಾತ್ಮಕ ಮಾನಸಿಕ ಆರೋಗ್ಯ ಕುರಿತು ಕೋಲಾರದಲ್ಲಿ ಪೊಲೀಸ್‌ ಸಿಬ್ಬಂದಿಗೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಯೋಗ ಕ್ಷೇಮ ಅಧಿಕಾರಿ ಲಿಂಗೇಶ್‌ ಮಾತನಾಡಿದರು   

ಕೋಲಾರ: ‘ಯಾವುದೇ ವ್ಯಕ್ತಿ ತನ್ನ ಕೌಟುಂಬಿಕ ಜೀವನ ಮತ್ತು ಸಮಾಜದಲ್ಲಿ ಉತ್ತಮ ಸಂಬಂಧ ಹೊಂದಲು ಮಾನಸಿಕ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಪೊಲೀಸ್‌ ಇಲಾಖೆಯಲ್ಲಿನ ಯೋಗ ಕ್ಷೇಮ ಅಧಿಕಾರಿ ಲಿಂಗೇಶ್‌ ಅಭಿಪ್ರಾಯಪಟ್ಟರು.

ಧನಾತ್ಮಕ ಮಾನಸಿಕ ಆರೋಗ್ಯ ಕುರಿತು ಇಲ್ಲಿ ಪೊಲೀಸ್‌ ಸಿಬ್ಬಂದಿಗೆ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ‘ವ್ಯಕ್ತಿ ತನ್ನ ಸ್ಥಿತಿಗತಿಗಳನ್ನು ಒಪ್ಪಿಕೊಂಡು ಸ್ವಇಚ್ಛೆಯಂತೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಜವಾಬ್ದಾರಿಗಳನ್ನು ನಿಭಾಯಿಸುವ ಸೂಕ್ಷ್ಮತೆ ಅರಿತರೆ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಕಿವಿಮಾತು ಹೇಳಿದರು.

‘ವ್ಯಕ್ತಿಗೆ ಮಾನಸಿಕ ಆರೋಗ್ಯವು ಆತ್ಮವಿದ್ದಂತೆ. ದೈಹಿಕವಾಗಿ ಸದೃಢವಲ್ಲದ ವ್ಯಕ್ತಿ ಮಾನಸಿಕವಾಗಿ ಸದೃಢವಾಗಿದ್ದರೆ ಉತ್ತಮ ಜೀವನ ನಡೆಸಬಲ್ಲರು. ಆರ್ಥಿಕ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಪ್ರೀತಿ ಪಾತ್ರರ ಅಗಲುವಿಕೆ, ಸಂಬಂಧಗಳಲ್ಲಿ ಬಿರುಕು, ವೃತ್ತಿಯಲ್ಲಿ ಒತ್ತಡ ಹಾಗೂ ಸಮಸ್ಯೆ, ಅತಿಯಾದ ನಿರೀಕ್ಷೆ, ಆಹಾರ ಪದ್ಧತಿ, ಧೂಮಪಾನ, ಮದ್ಯಪಾನ, ನಿರುತ್ಸಾಹವು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.