ಚಿಂತಾಮಣಿ: ಅಮೆಜಾನ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿರುವ ಸೈಬರ್ ಖದೀಮರು ನಗರದ ಮಹಿಳೆಯೊಬ್ಬರಿಗೆ ₹1.30 ಲಕ್ಷ ವಂಚಿಸಿದ್ದಾರೆ.
ಈ ಸಂಬಂಧ ಸಿ.ಇ.ಎನ್ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ವೆಂಕಟಗಿರಿ ಕೋಟೆ ನಿವಾಸಿ ಶಮಾ ಕೌಸರ್ ಹಣ ಕಳೆದುಕೊಂಡವರು.
ಅವರ ಮೊಬೈಲ್‌ಗೆ ವರ್ಕ್ ಪ್ರಮ್ ಹೋಮ್ ಅಂತ ಅಮೆಜಾನ್ ಹೆಸರಿ ನಲ್ಲಿ ಸಂದೇಶ ಬಂದಿತ್ತು. ಅದೇ ದಿನ ಸ್ವಲ್ಪ ಸಮಯದ ನಂತರ ಇವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದು ಎಂದು ನಂಬಿಸಿದ್ದಾನೆ. ಇದನ್ನೇ ನಂಬಿ ಸಂದೇಶದ ಲಿಂಕ್ ಕ್ಲಿಕ್ ಮಾಡಿ ನೋಂದಣಿ ಮಾಡಿ ಕೊಂಡಿದ್ದಾರೆ. ಒಟ್ಟು ₹1.30 ಲಕ್ಷ ಹೂಡಿಕೆ ಮಾಡಿದ್ದೇನೆ. ವೆಬ್‌ಸೈಟ್ ಖಾತೆಯಲ್ಲಿ ₹2,26,193 ಅಸಲು, ಲಾಭ ಬಂದಿರುವ ಹಾಗೆ ಸಂದೇಶ ತೋರಿಸ ತ್ತಿದೆ. ಆದರೆ ಹಣ ತೆಗೆದು ಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.