
ಕೊಕ್ಕರೆ
ಶ್ರೀನಿವಾಸಪುರ: ತಾಲ್ಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟ ಬೆನ್ನಲ್ಲೇ, ಅರಣ್ಯ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪಶು ಇಲಾಖೆ ಉಪನಿರ್ದೇಶಕ ಡಾ.ರಮೇಶ್ ಹಾಗೂ ಪ್ರಾದೇಶಿಕ ಸಂಶೋಧನಾ ವಿಭಾಗದ ಅಧಿಕಾರಿ ಡಾ.ನಟರಾಜ್ ನೇತೃತ್ವದ ತಂಡ ಕೆರೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಿತು.
ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಮೀನಿನ ಬಲೆಗಳು ಮತ್ತು ದಾರಗಳು ಪಕ್ಷಿಗಳ ಕಾಲುಗಳಿಗೆ ಸಿಲುಕಿಕೊಂಡಿವೆ. ಈ ಸ್ಥಿತಿಯಲ್ಲೇ ಮರ ಏರಿದ್ದ ಪಕ್ಷಿಗಳು, ದಾರಗಳು ಮರದ ಕೊಂಬೆಗಳಿಗೆ ಸಿಕ್ಕಿಹಾಕಿಕೊಂಡ ಪರಿಣಾಮ ಬಿಡಿಸಿಕೊಳ್ಳಲಾಗದೆ ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.
ಪಕ್ಷಿಗಳ ಸಾವಿಗೆ ಯಾವುದೇ ವೈರಾಣು ಅಥವಾ ಸಾಂಕ್ರಾಮಿಕ ರೋಗ ಕಾರಣವಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.