ADVERTISEMENT

ಮುಳಬಾಗಿಲು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಉತ್ತಮ ಗ್ರೇಡಿಂಗ್ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:08 IST
Last Updated 18 ಆಗಸ್ಟ್ 2024, 14:08 IST
ಮುಳಬಾಗಿಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ತರಬೇತಿ ಸಂಸ್ಥೆ ಉತ್ತಮ ಗ್ರೇಡಿಂಗ್ ಪ್ರಶಸ್ತಿಯನ್ನು ಪಡೆದಿದೆ.
ಮುಳಬಾಗಿಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ತರಬೇತಿ ಸಂಸ್ಥೆ ಉತ್ತಮ ಗ್ರೇಡಿಂಗ್ ಪ್ರಶಸ್ತಿಯನ್ನು ಪಡೆದಿದೆ.   

ಮುಳಬಾಗಿಲು: 2024-25ನೇ ಸಾಲಿನ ಕೈಗಾರಿಕಾ ತರಬೇತಿ ಸಂಸ್ಥೆಗಳ ಗ್ರೇಡಿಂಗ್ ಭಾನುವಾರ ಪ್ರಕಟವಾಗಿದ್ದು, ಮುಳಬಾಗಿಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ‌10 ಅಂಕಗಳಿಗೆ 9.1 ಅಂಕ ಪಡೆದಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಿಂದ ಪ್ರತಿವರ್ಷ ಗ್ರೇಡಿಂಗ್ ಪ್ರಕಟವಾಗಲಿದ್ದು, ಉತ್ತಮ ಫಲಿತಾಂಶ, ಸಂಸ್ಥೆ ನಿರ್ವಹಣೆ, ಆಡಳಿತ ಹಾಗೂ ವಿದ್ಯಾರ್ಥಿಗಳ ಉದ್ಯೋಗ ಸೃಷ್ಟಿ ಮತ್ತಿತರ ಮಾನದಂಡಗಳನ್ನು ಆಧರಿಸಿ ಗ್ರೇಡಿಂಗ್ ನೀಡಲಾಗುತ್ತದೆ. 

ಮುಳಬಾಗಿಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೆ.ಆರ್.ಹಾಲಪ್ಪಶೆಟ್ಟಿ, ಮುಸ್ರತ್ ಫಾತಿಮಾ, ಆಡಳಿತ ಅಧಿಕಾರಿ ಎಂ. ಶಿವಾನಂದ, ಜಿ.ವೈ. ರಾಘವೇಂದ್ರರಾವ್, ಕಿರಿಯ ತರಬೇತಿ ಅಧಿಕಾರಿ ವಿ.ಕೃಷ್ಣೆಗೌಡ, ಎಸ್. ಕೃಷ್ಣಪ್ಪ, ಕೆ.ಟಿ. ನಾರಾಯಣಪ್ಪ, ಎಂ.ಆರ್. ಸುಕನ್ಯ, ಕೆ.ಎಸ್.ತಿಪ್ಪಯ್ಯ, ಎಸ್.ಬಿ.ಬೈರೇಗೌಡ, ಟಿ.ಆಶಾ, ಎಂ.ರಘುನಾಥ್, ಆರ್.ಮಂಜುಳಾಬಾಯ್, ಅತಿಥಿ ಬೋಧಕರಾದ ಕೆ.ಎಸ್.ಅಶೋಕ್ ಕುಮಾರ್, ಕೆ. ಶಿವಕುಮಾರ್, ಶೃತಿಶ್ರೀ ಮತ್ತಿತರರು ಸಂಸ್ಥೆಯಲ್ಲಿ ಸಿಹಿ ಹಂಚಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.