
ಪ್ರಜಾವಾಣಿ ವಾರ್ತೆ
ಮುಳಬಾಗಿಲು: ಮನೆಗೆ ಬೀಗ ಹಾಕಿ ಉರುಸ್ ನೋಡಲು ಹೋಗಿದ್ದ ವೇಳೆ ಮನೆ ಕಬ್ಬಿಣದ ಕಿಟಕಿ ಸರಳು ಕತ್ತರಿಸಿ ಆಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಾರುತಿ ನಗರದ ಧನಂಜಯ ತಮ್ಮ ಕುಟುಂಬದೊಂದಿಗೆ ಹೈದರ್‌ವಲ್ಲಿ ದರ್ಗಾ ಬಳಿ ಉರುಸ್ ನೋಡಲು ಹೋಗಿದ್ದರು. ಈ ಸಂದರ್ಭದಲ್ಲಿ ಅಪರಿಚಿತರು ಒಳನುಗ್ಗಿ 5 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಆಭರಣ ಮತ್ತು ₹90 ಸಾವಿರ ನಗದು ಕಳವು ಮಾಡಿದ್ದಾರೆ.
ಮುಳಬಾಗಿಲು ನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.