ADVERTISEMENT

ಮುಳಬಾಗಿಲು ದ್ರೌಪದಮ್ಮ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:45 IST
Last Updated 12 ಮೇ 2025, 14:45 IST
ಮುಳಬಾಗಿಲು ನಗರದಲ್ಲಿ ನಡೆದ ದ್ರೌಪದಮ್ಮ ದೇವಿಯ ಕರಗ ಮಹೋತ್ಸವ 
ಮುಳಬಾಗಿಲು ನಗರದಲ್ಲಿ ನಡೆದ ದ್ರೌಪದಮ್ಮ ದೇವಿಯ ಕರಗ ಮಹೋತ್ಸವ    

ಮುಳಬಾಗಿಲು: ನಗರದ ಪಳ್ಳಿಗರ ಪಾಳ್ಯದಲ್ಲಿರುವ ಶಕ್ತಿಮಾತೆ ದ್ರೌಪದಮ್ಮ ದೇವಿಯ 119ನೇ ವರ್ಷದ ಕರಗ ಮಹೋತ್ಸವ ಎರಡು ದಿನ ಅದ್ಧೂರಿಯಾಗಿ ನಡೆಯಿತು.

ನೂರಾರು ವರ್ಷಗಳ ಇತಿಹಾಸ ಇರುವ ಕರಗ ಮಹೋತ್ಸವ ಪ್ರಯುಕ್ತ ಎಂಟು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಗಣಪತಿ ಪೂಜೆ, ಧ್ವಜಾರೋಹಣ, ಆಯುಧ ಪೂಜೆ, ಹಸಿ ಕರಗ, ಕಲ್ಯಾಣೋತ್ಸವ ಕಾರ್ಯಕ್ರಮಗಳು ವೈಭವದಿಂದ ನಡೆದವು. ಭಾನುವಾರ ಮಧ್ಯರಾತ್ರಿ ಕರಗಧಾರಿ ಎಲ್. ವೆಂಕಟೇಶ್ ಕರಗವನ್ನು ದೇವಾಲಯದಿಂದ ಎತ್ತಿಕೊಂಡು ಆಚೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಗೂ ಸಾರ್ವಜನಿಕರು ಕರಗವನ್ನು ಸ್ವಾಗತಿಸಿದರು. ನಂತರ ನಗರದ ಎಲ್ಲಾ ಬೀದಿಗಳಲ್ಲಿ ಕರಗ ಮೆರವಣಿಗೆ ನಡೆಯಿತು. ಮೆರವಣಿಗೆಯ ಉದ್ದಕ್ಕೂ ಮಹಿಳೆಯರು ಪೂಜೆ ಮಾಡಿದರು. ನಂತರ ನಗರದ ಎಲ್ಲಾ ದೇವರುಗಳ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಸೋಮವಾರ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕುಂಡದಲ್ಲಿ ಇಳಿಯುವ ಮೂಲಕ ಕರಗ ಮಹೋತ್ಸವಕ್ಕೆ ತೆರೆಬಿದ್ದಿತು. ನಂತರ ಒನಕೆ ಕರಗ, ವಸಂತೋತ್ಸವ ಮತ್ತಿತರರ ಕಾರ್ಯಕ್ರಮಗಳು ನಡೆದವು.

ADVERTISEMENT

ಕುಸ್ತಿ ಪಂದ್ಯಾವಳಿ: ಸಂಪ್ರದಾಯದಂತೆ ಕರಗ ಮಹೋತ್ಸವ ಪ್ರಯುಕ್ತ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಗಳು ನಡೆದವು. ಪಂದ್ಯಾವಳಿಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಶಾಸಕ ಸಮೃದ್ಧಿ ಮಂಜುನಾಥ್, ಕಾಂಗ್ರೆಸ್ ಮುಖಂಡ ವಿ. ಆದಿ ನಾರಾಯಣ, ವೈ.ಶಂಭಯ್ಯ, ರಾಜೇಂದ್ರ ಗೌಡ, ನಗವಾರ ಎನ್.ಆರ್.ಸತ್ಯಣ್ಣ, ಮಂಜುನಾಥ ಸ್ವಾಮಿ, ಗರಡಿ ಶಂಕರಪ್ಪ, ಕದಂಬ ಶಂಕರಪ್ಪ, ವೆಂಕಟೇಶಪ್ಪ ಮತ್ತಿತರರು ಇದ್ದರು.

ಕರಗ ಮಹೋತ್ಸವ ಪ್ರಯುಕ್ತ ಮೂಲ ದೇವರ ವಿಗ್ರಹವನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರು.
ಕರಗದ ಪ್ರಯುಕ್ತ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.