
ಮುಳಬಾಗಿಲು: ನಗರದ ಹೊರವಲಯದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಈಚೆಗೆ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಂಕ್ರಾಂತಿ ಸ್ವಾಗತೋತ್ಸವ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ಮಹಿಳೆಯರಿಗೆ ಸನ್ಮಾನ ಮತ್ತು ರಾಜ್ಯಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷ ಅಲಂಗೂರು ವೈ.ಸುರೇಂದ್ರ ಗೌಡ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲೂ ಭೋಗಿ, ಮಕರ ಸಂಕ್ರಾಂತಿ ವಿಶೇಷವಾದದ್ದು ಎಂದರು.
ದೇಶದ ಉನ್ನತಿಗೆ ಶ್ರಮಿಸಿದ ಮಹನೀಯರ ಜಯಂತಿ ಆಚರಿಸುವುದರಿಂದ ಮಕ್ಕಳಲ್ಲಿ ಸಾಧಕರ ಪ್ರಭಾವ ಬೀರುತ್ತದೆ. ಇದರಿಂದ ಸದೃಢ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದರು.
ಎಸ್.ನಾರಾಯಣಪ್ಪ, ಕೆ.ರಘುನಾಥ್ ರೆಡ್ಡಿ, ಶ್ರೀನಿವಾಸ ಗೌಡ, ಎಂ.ಕೆ.ವಾಸುದೇವ್, ಪಿ.ಎಂ.ರಘುನಾಥ್, ಕೆ.ಸತೀಶ್, ಅಮರ್, ವಿಶ್ವನಾಥ್, ಮಿಣಿಜೇಣಹಳ್ಳಿ ಪಾಪಮ್ಮ, ಡಿ.ಕುರುಬರಹಳ್ಳಿ ಪಾಪಮ್ಮ, ಸೀಗೇನಹಳ್ಳಿ ಗೋವಿಂದಮ್ಮ, ಬಿ.ಎಸ್.ಶಶಿಕಲಾ, ಉಗಣಿ ಆರ್. ನಾರಾಯಣಗೌಡ, ವೆಂಕಟರಾಮಚಾರಿ, ಪಿ.ಗಂಗಾಪುರ ಮುನಿ ವೆಂಕಟರಾಮಯ್ಯ, ಪ್ರೇಮಮ್ಮ, ಬಿ.ದೇವಾನಂದ್, ಕೆ.ತ್ಯಾಗರಾಜ್, ಕೋಳಿ ನಾಗರಾಜ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.