ಮುಳಬಾಗಿಲು: ತಾಲ್ಲೂಕಿನ ನಂಗಲಿ ಗ್ರಾಮದ ಸ್ಮಶಾನ ಸ್ಥಳ ಸರ್ವೆ ನಡೆಸಿ ಹಿಂದೂ ರುದ್ರಭೂಮಿ ಎಂದು ಪ್ರತ್ಯೇಕ ಖಾತೆ ಮಾಡಬೇಕೆಂದು ಗ್ರಾಮಸ್ಥರು ನೀಡಿದ್ದ ಮನವಿಗೆ ಸ್ಪಂದಿಸಿ ಶನಿವಾರ ಸರ್ವೆ ಹಾಗೂ ಕಂದಾಯ ಅಧಿಕಾರಿಗಳು ಸ್ಮಶಾನ ಸರ್ವೆ ನಡೆಸಿದರು.
ನಂಗಲಿಯಲ್ಲಿ ಸುಮಾರು 2 ಸಾವಿರ ಮನೆ ಹಾಗೂ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದ್ದು, ವಿಸ್ತಾರವಾದ ಸ್ಮಶಾನ ಭೂಮಿ ಇದ್ದರೂ ದಾಖಲೆಗಳಲ್ಲಿ ಸ್ಮಶಾನ ಎಂದು ತೋರಿಸುತ್ತಿರಲಿಲ್ಲ. ಹಾಗಾಗಿ ಗ್ರಾಮಸ್ಥರು ಜುಲೈ 17 ರಂದು ಗ್ರೇಡ್ 2 ತಹಶೀಲ್ದಾರ್ ಬಿ.ಆರ್. ಮುನಿವೆಂಕಟಪ್ಪರಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರಜಾವಾಣಿಯಲ್ಲಿ ‘ಸ್ಮಶಾನ ಜಾಗ: ಖಾತೆಗೆ ಮನವಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ.
ಉಪ ತಹಶೀಲ್ದಾರ್ ಕೆ.ಟಿ.ವೆಂಕಟೇಶಪ್ಪ, ಸರ್ವೆ ಅಧಿಕಾರಿ ಪ್ರಭು, ಗ್ರಾಮ ಲೆಕ್ಕಾಧಿಕಾರಿ ಶ್ರೀನಿಧಿ, ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ. ಶ್ರೀಧರ್, ರಮೇಶ್, ಕಿಶೋರ್, ಮೋಹನ್, ಮಣಿ, ಚಂದ್ರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.