ADVERTISEMENT

ಕೋಲಾರ: ಪಟಾಕಿ ಚೀಟಿ ಹೆಸರಿನಲ್ಲಿ ಕೋಟ್ಯಂತರ ವಂಚನೆ

ಗಾರ್ಮೆಂಟ್ಸ್ ಕಾರ್ಮಿಕರಿಗೆ ವೇತನ ನೀಡದ ಮಾಲೀಕ ನಾಪತ್ತೆ: ಕಾರ್ಮಿಕರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 6:06 IST
Last Updated 24 ಅಕ್ಟೋಬರ್ 2025, 6:06 IST
ಬಂಗಾರಪೇಟೆ ನಗರದಲ್ಲಿ ಭರತ್ ಎಕ್ಸ್‌ಪೋರ್ಟ್‌ ಗಾರ್ಮೆಂಟ್ಸ್ ಬಳಿ‌ ಕಾರ್ಮಿಕರು ಪ್ರತಿಭಟನೆ ನಡೆಸಿದರು 
ಬಂಗಾರಪೇಟೆ ನಗರದಲ್ಲಿ ಭರತ್ ಎಕ್ಸ್‌ಪೋರ್ಟ್‌ ಗಾರ್ಮೆಂಟ್ಸ್ ಬಳಿ‌ ಕಾರ್ಮಿಕರು ಪ್ರತಿಭಟನೆ ನಡೆಸಿದರು    

ಬಂಗಾರಪೇಟೆ: ಪಟಾಕಿ ಚೀಟಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿರುವ ಭರತ್, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸಂಬಳ ನೀಡದೆ ಪರಾರಿಯಾಗಿದ್ದಾನೆ. ಈ ಹಿನ್ನೆಲೆ ಗುರುವಾರ 50ಕ್ಕೂ ಹೆಚ್ಚು ಕಾರ್ಮಿಕರು ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ನಡೆಸಿದರು.

ದೀಪಾವಳಿ ಹಬ್ಬಕ್ಕೆ ದಿನಸಿ ಸಾಮಗ್ರಿ, ಪಟಾಕಿ ಮತ್ತು ಉಡುಗೊರೆ ನೀಡುವುದಾಗಿ ಸುಮಾರು 21 ಸಾವಿರ ಜನರಿಂದ ಪಟಾಕಿ ಚೀಟಿ ಕಟ್ಟಿಸಿಕೊಂಡಿದ್ದ ಭರತ್ ಕೋಟ್ಯಂತರ ರೂಪಾಯಿ ವಂಚಿಸಿ ಊರು ಬಿಟ್ಟು ಪರಾರಿಯಾಗಿದ್ದಾನೆ.

ಪಟ್ಟಣದ ಅಮರಾವತಿ ಬಡಾವಣೆಯ ನಿವಾಸಿ ಭರತ್ ಭರತ್ ಎಕ್ಸ್‌ಪೋರ್ಟ್ಸ್‌ ಹೆಸರಿನಲ್ಲಿ ಗಾರ್ಮೆಂಟ್ಸ್‌ ನಡೆಸುತ್ತಿದ್ದು, ಇದರಲ್ಲಿ ಸುಮಾರು 110 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಜೊತೆಗೆ ವಿಕೋಟ ಬಳಿ ಮತ್ತೊಂದು ಗಾರ್ಮೆಂಟ್ಸ್ ತೆರೆದು ಅದರಲ್ಲಿ 80 ಮಂದಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ದೀಪಾವಳಿ ಹಬ್ಬದ ನಂತರ ಸಂಬಳ ನೀಡುವುದಾಗಿ ಕಾರ್ಮಿಕರಿಗೆ ತಿಳಿಸಿ ಹಬ್ಬಕ್ಕೆ ಎರಡು ದಿನ ರಜೆ ನೀಡಿ ಹಣದೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದಾರೆ.

ADVERTISEMENT

ಕಾರ್ಮಿಕರಿಗೆ ಒಂದೂವರೆ ತಿಂಗಳು ಸಂಬಳ ನೀಡಬೇಕಿದ್ದು, ಕಾರ್ಮಿಕರಿಗೆ ಸಂಬಳ ಕೈಗೆ ಸಿಗದ ಕಾರಣ ಬಾಡಿಗೆ ಹಾಗೂ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಗಾರ್ಮೆರ್ಟ್ಸ್‌ನ ಅಧಿಕಾರಿಗಳ ಫೋನ್ ಸ್ವಿಚ್‌ ಆಫ್‌ ಆಗಿದ್ದು, ಕಾರ್ಮಿಕರ ಬದುಕು ಬೀದಿ ಬೀಳುವಂತಾಗಿದೆ. ಹಾಗಾಗಿ ಕಾರ್ಮಿಕರು ಗಾರ್ಮೆಂಟ್ಸ್ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.