ADVERTISEMENT

ನ್ಯುಮೋನಿಯ ಜ್ವರ: ಶಾಲಾ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 10:43 IST
Last Updated 13 ಸೆಪ್ಟೆಂಬರ್ 2019, 10:43 IST

ಮುಳಬಾಗಿಲು: ನ್ಯುಮೋನಿಯ ಜ್ವರಕ್ಕೆ ಶಾಲಾ ಬಾಲಕಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ನಗರದ ಮುತ್ಯಾಲಪೇಟಿ (ಕೊಲಿಮಿಕುಂಟೆ) ವಾಸಿಯಾದ ವೆಂಕಟಾಚಲಪತಿ ಮತ್ತು ಗೀತಾ ಅವರ ಪುತ್ರಿ ಮಾನಸ (8) ಮೃತ ಬಾಲಕಿ.

ಶಿವಕೇಶವನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ಮಾನಸಗೆ ಮಂಗಳವಾರ ಒಂದು ದಿವಸ ಬಂದ ಜ್ವರದಿಂದ ಮಗು ಸಾಕಷ್ಟು ನರಳಿದೆ ವಾಂತಿ ಕಾರಣ ನಿಶಕ್ತಿಗೊಂಡಿದ್ದಳು. ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು ಪ್ರಯೋಜನವಾಗದೇ ಮೃತಪಟ್ಟಿದ್ದಾಳೆ. ನ್ಯುಮೋನಿಯ ಜ್ವರ ಮಗುವಿನ ಸಾವಿಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT