ADVERTISEMENT

ಡಿ.ಸಿ ಗ್ರಾಮ ವಾಸ್ತವ್ಯ: ನಾಚಹಳ್ಳಿಗೆ ಅದೃಷ್ಟ

ತಾಲ್ಲೂಕು ಆಡಳಿತದಿಂದ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:06 IST
Last Updated 14 ಫೆಬ್ರುವರಿ 2021, 3:06 IST
ಮುಳಬಾಗಿಲು ತಾಲ್ಲೂಕಿನ ನಾಚಹಳ್ಳಿ ಗ್ರಾಮದಲ್ಲಿ ತೆರೆಯಲಾಗಿರುವ ಆಧಾರ್ ಕಾರ್ಡ್‌ ಕೇಂದ್ರ
ಮುಳಬಾಗಿಲು ತಾಲ್ಲೂಕಿನ ನಾಚಹಳ್ಳಿ ಗ್ರಾಮದಲ್ಲಿ ತೆರೆಯಲಾಗಿರುವ ಆಧಾರ್ ಕಾರ್ಡ್‌ ಕೇಂದ್ರ   

ಮುಳಬಾಗಿಲು: ರಸ್ತೆ ಇಲ್ಲದ ಈ ಗ್ರಾಮಕ್ಕೆ ರಸ್ತೆ, ಅತಿಕ್ರಮಿಸಿಕೊಳ್ಳಲಾದ ಸ್ಮಶಾನದ ಜಾಗ ತೆರವು, ಆಧಾರ್ ಕಾರ್ಡ್‌ ಮಾಡಿಸಿಕೊಳ್ಳದವರಿಗೆ ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ ಇಲ್ಲದವರಿಗೆ ರೇಷನ್ ಕಾರ್ಡ್‌ ಇದೇನು ಅಚ್ಚರಿ ಎನ್ನಬೇಡಿ. ತಾಲ್ಲೂಕಿನ ದುಗ್ಗಸಂದ್ರ ಹೋಬಳಿ ನಾಚಹಳ್ಳಿ ಗ್ರಾಮಕ್ಕೆ ಸಿಕ್ಕಭಾಗ್ಯ ಅಷ್ಟು ಇಷ್ಟಲ್ಲ.

ಫೆ.19ರಂದು ನಾಚಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಗ್ರಾಮಸ್ಥರು ಇದುವರೆಗೂ ತಿಳಿಯದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಇತರೆ ಇಲಾಖೆಗಳ ಎಲ್ಲ ಯೋಜನೆಗಳನ್ನು ಅಧಿಕಾರಿಗಳು ನಾಚಹಳ್ಳಿ ಗ್ರಾಮಕ್ಕೆ ನೀಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ವಾಸ್ತವ್ಯದ ಕಾರಣ ಗ್ರಾಮಸ್ಥರಿಗೆ ಇದೀಗ ಅನುಕೂಲಗಳು ಲಭ್ಯವಾಗುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ವಾಸ್ತವ್ಯವನ್ನು ಹೆಚ್ಚು ಗ್ರಾಮಗಳಿಗೆ ವಿಸ್ತರಿಸಿದರೆ ಅಲ್ಲಿನ ಗ್ರಾಮಸ್ಥರ ಬದುಕು ಹಸನಾಗಬಹುದು ಎನ್ನುತ್ತಾರೆ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.