ADVERTISEMENT

ವಿಧಾನ ಪರಿಷತ್ ಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:03 IST
Last Updated 5 ಡಿಸೆಂಬರ್ 2021, 5:03 IST

ಮುಳಬಾಗಿಲು: ಡಿ. 10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ನಗರಸಭೆ ಕಚೇರಿಮತ್ತು ಮೂವತ್ತು ಗ್ರಾ.ಪಂ. ಕಚೇರಿಗಳನ್ನು ಮತಗಟ್ಟೆ ಕೇಂದ್ರಗಳನ್ನಾಗಿ ಮಾಡಿದ್ದು, ಶಾಂತಿಯುತವಾಗಿ ಚುನಾವಣೆ ನಡೆಯಲು ಬಂದೋಬಸ್ತ್‌ ಮಾಡಲಾಗಿದೆ ಎಂದು ತಹಶೀಲ್ದಾರ್ ಕಚೇರಿ ತಿಳಿಸಿದೆ.

ತಾಲ್ಲೂಕಿನ ನಗರಸಭೆ ಸದಸ್ಯರು, ನಾಮಿನಿ ಸದಸ್ಯರು ಸೇರಿದಂತೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಒಟ್ಟು 552 ಮತದಾರರಿದ್ದಾರೆ. ಅಂದು ಬೆಳಿಗ್ಗೆ 8ರಿಂದ 4 ಗಂಟೆವರೆಗೆ ಮತದಾನ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಐ, ಮೊದಲ ಮತಗಟ್ಟೆ ಅಧಿಕಾರಿ ಮತ್ತು ಡಿ ಗ್ರೂಪ್ ನೌಕರರು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಚುನಾವಣಾ ಕೆಲಸಕ್ಕೆ 84 ಮಂದಿಯನ್ನು ನಿಯೋಜಿಸಲಾಗಿದೆ. ತಾಲ್ಲೂಕಿನಲ್ಲಿ ತಹಶೀಲ್ದಾರ್, ತಾ.ಪಂ. ಇಒ, ನಗರಸಭೆ ಪೌರಾಯುಕ್ತರ ಪ್ರತ್ಯೇಕ ಜಾಗೃತಿ ದಳ ತಂಡವನ್ನು ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ. ನೀತಿಸಂಹಿತೆ ಲೋಪವಾಗದಂತೆ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ ಎಂದು ಪ್ರಕಟಣೆ
ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.