ADVERTISEMENT

ಕೋಲಾರ| ವೇಶ್ಯಾವಾಟಿಕೆ ಅಡ್ಡೆಗೆ ದಾಳಿ; 8 ಮಂದಿ ಸೆರೆ

ಮಾಲೂರು ನಗರದ 2 ಕಡೆ ದಂಧೆ, ಇಬ್ಬರು ಮಹಿಳೆಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:34 IST
Last Updated 10 ಜನವರಿ 2026, 6:34 IST
   

ಕೋಲಾರ: ಜಿಲ್ಲೆಯ ಮಾಲೂರು ನಗರದಲ್ಲಿ ಪೊಲೀಸರು ಎರಡು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ವೆಂಕಟ್ ಮೋಹನ್, ವೆಂಕಟರಾಮಪ್ಪ (ದೊಡ್ಡ ಇಗ್ಗಲೂರು ಗ್ರಾಮ), ಭೈರೇಗೌಡ (ದೊಡ್ಡ ಸಬ್ಬೇನಹಳ್ಳಿ ಗ್ರಾಮ), ನಟರಾಜ್ (ಮಾಲೂರು ನಗರ), ಯಶೋಧಮ್ಮ (ಚೋಳಘಟ್ಟ ಗ್ರಾಮ, ಕೋಲಾರ ತಾಲ್ಲೂಕು), ಜಮುನಾ (ಬನಶಂಕರಿ, ಬೆಂಗಳೂರು), ಮುನಿರಾಜು (ಟೇಕಲ್), ಮಾಧವಿ (ಕುಂಬಾರಪೇಟೆ, ಮಾಲೂರು ನಗರ) ಬಂಧಿತ ಆರೋಪಿಗಳು.

ಮಾಲೂರು ನಗರದ ಕೋಲಾರ ರಸ್ತೆಯಲ್ಲಿರುವ ವೆಂಕಟ್ ಮೋಹನ್ ಬಿಲ್ಡಿಂಗ್ ಹಾಗೂ ಆರ್‌ಎಫ್‌ ರಸ್ತೆಯ ನಟರಾಜ್ ಕಟ್ಟಡಗಳಲ್ಲಿ ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆಸಿ ಪುರುಷರಿಗೆ ಪೂರೈಸಿ ಹಣ ಗಳಿಸುತ್ತಿದ್ದರು. ಈ ಎರಡೂ ವೇಶ್ಯಾವಾಟಿಕೆ ಅಡ್ಡೆಗಳನ್ನು ಪೊಲೀಸರು ಪತ್ತೆ ಹಚ್ಚಿ ದಾಳಿ ನಡೆಸಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ 6 ಮೊಬೈಲ್ ಫೋನ್‌ಗಳು, ₹2,500 ನಗದು, ಹಾಗೂ ವೇಶ್ಯಾವಾಟಿಕೆಗೆ ಬಳಸಲು ತಂದಿದ್ದ ನಿರೋಧ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್ ಹಾಗೂ ಜಗದೀಶ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್‌ ನಾಗ್ತೆ, ಮಾಲೂರು ಠಾಣೆ ಇನ್‌ಸ್ಪೆಕ್ಟರ್‌ ‌ರಾಮಪ್ಪ ಬಿ ಗುತ್ತೇರ್, ಎಸ್‌ಐ ಗೀತಮ್ಮ, ಶಾಂತಮ್ಮ, ಎಎಶ್‌ಐ ಆನಂದ್, ರಮೇಶ್ ಬಾಬು ಹಾಗೂ ಸಿಬ್ಬಂದಿ ಅನಂತಮೂರ್ತಿ, ಪರಶಿವಮೂರ್ತಿ, ಮುರಳಿ, ನಾಗರಾಜ್ ಪೂಜಾರ್, ನಾಗಪ್ಪ ತಳವಾರ ಭಾಗವಹಿಸಿದ್ದರು.

ಪೊಲೀಸರು ಐಟಿಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸಿಬ್ಬಂದಿ ಕಾರ್ಯವನ್ನು ಎಸ್‌ಪಿ ಕನ್ನಿಕಾ ಶ್ಲಾಘಿಸಿದ್ದಾರೆ.